main logo

ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಪತ್ನಿ ವಿಧಿವಶ: ಸಂತಾಪ ಸೂಚಿಸಿದ ಸಿಎಂ

ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಪತ್ನಿ ವಿಧಿವಶ: ಸಂತಾಪ ಸೂಚಿಸಿದ ಸಿಎಂ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಪತ್ನಿ ಶಾರದಾ ಪಾಟೀಲ್ (93) ಅವರು ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ವಿಧಿವಶರಾಗಿದ್ದಾರೆ.

ಮೃತ ಶಾರದಾ ಪಾಟೀಲ ಅವರು, ಮಾಜಿ ಶಾಸಕ ಕೈಲಾಸನಾಥ್ ಪಾಟೀಲ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪಾರ್ಥೀವ ಶರೀರವನ್ನು ಚಿಂಚೋಳಿಗೆ ತೆಗೆದುಕೊಂಡು ಹೋಗಲು ಕುಟಂಬಸ್ಥರು ನಿರ್ಧರಿಸಿದ್ದಾರೆ. ಚಿಂಚೋಳಿಯಲ್ಲಿರುವ ವೀರೇಂದ್ರ ಪಾಟೀಲರ ಸಮಾಧಿ ಪಕ್ಕದಲ್ಲೇ ಶಾರದಾ ಪಾಟೀಲರ ಅಂತ್ಯಕ್ರಿಯೆ ಬುಧವಾರ ಅಪರಾಹ್ನ ನಡೆಯಲಿದೆ ಎಂದು ಕೈಲಾಸನಾಥ ಪಾಟೀಲ ತಿಳಿಸಿದ್ದಾರೆ.

ಮೃತ ಶಾರದಾ ಪಾಟೀಲ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ, ಶಾರದಾ ಪಾಟೀಲ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಶಾರದಾ ಪಾಟೀಲ್ ಅವರ ಅಗಲಿಕೆಯಿಂದ ನೊಂದಿರುವ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!