ತಿರುವನಂತಪುರಂ: ಮಣ್ಣಿನಲ್ಲಿ ಹೂತಿಟ್ಟ ಆನೆಯ ಮೃತದೇಹವನ್ನು ಕೇರಳದ ತ್ರಿಶೂರ್ ಜಿಲ್ಲೆಯ ಚೇಲಕರದ ಎಂ.ರಾಯ್ ಅವರಿಗೆ ಸೇರಿದ ರಬ್ಬರ್ ಎಸ್ಟೇಟ್‌ನಿಂದ ಹೊರತೆಗೆಯಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು ಮೂರು ವಾರಗಳ ಹಿಂದೆ ಆನೆಯನ್ನು ಎಸ್ಟೇಟ್ ಒಳಭಾಗದಲ್ಲಿ ಗುಂಡಿ ಮಾಡಿ ಹೂತಿಡಲಾಗಿತ್ತು. ಆನೆ ಮೃತಶರೀರ ಬೇಗ ಕೊಳೆಯಲು ಮಾಡಲು ಯಾವುದಾದರೂ ರಾಸಾಯನಿಕಗಳನ್ನು ಬಳಸಲಾಗಿದೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
ಘಟನೆ ಬಳಿಕ ಎಸ್ಟೇಟ್ ಮಾಲೀಕ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಅರಣ್ಯ ಸಿಬ್ಬಂದಿ, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ರಾಜ್ಯ ಅರಣ್ಯ ಸಚಿವ ಎ.ಕೆ.ಸಶೀಂದ್ರನ್ ಈ ಬಗ್ಗೆ ಮಾತನಾಡಿದ್ದು, ಆನೆ ಬೇಟೆಯಾಡಿದ್ದೇ ಅಥವಾ ಸತ್ತು ಬಿದ್ದ ನಂತರ ಹೂತಿಡಲಾಗಿತ್ತೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಸಾವಿಗೆ ನಿಜವಾದ ಕಾರಣ ತಿಳಿದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಆನೆಯ ಒಂದು ದಂತ ಕಾಣೆಯಾಗಿದೆ ಎಂದು ವರದಿಯಾಗಿದೆ.