main logo

FLIPKART BIg billion days: ಇಲ್ಲಿದೆ ನೋಡಿ ಆಫರ್‌ ಗಳ ಪಟ್ಟಿ, ಐಫೋನ್‌ ಗಳ ಮೇಲೆ ಭರ್ಜರಿ ಆಫರ್‌

FLIPKART BIg billion days: ಇಲ್ಲಿದೆ ನೋಡಿ ಆಫರ್‌ ಗಳ ಪಟ್ಟಿ, ಐಫೋನ್‌ ಗಳ ಮೇಲೆ ಭರ್ಜರಿ ಆಫರ್‌

ಬೆಂಗಳೂರು:  ಭಾರತೀಯರೆಲ್ಲ ಅತಿ ಕಾತುರದಿಂದ ಕಾಯುತ್ತಿರುವ ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳ ಅಕ್ಟೋಬರ್ 8 ರಿಂದ ಆರಂಭವಾಗಲಿದೆ. ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಅ. 8ರಿಂದ 15ರವರೆಗೆ ನಡೆಯಲಿದೆ. ಫ್ಲಿಪ್ ಕಾರ್ಟ್ ಪ್ಲಸ್ ಗ್ರಾಹಕರಿಗೆ ಒಂದು ದಿನ ಮೊದಲೇ ಅಂದರೆ ಅ. 7 ರಿಂದಲೇ ಇದರ ಪ್ರಯೋಜನ ಹೊಂದಲಿದ್ದಾರೆ. ಬಿಗ್ ಬಿಲಿಯನ್ ಡೇಸ್ 10ನೇ ವರ್ಷದ ಮಾರಾಟ ಮೇಳ ಇದಾಗಿದೆ. ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಮೊಬೈಲ್ ಫೋನ್, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್ ಸೇರಿದಂತೆ ನಾನಾ ಗ್ಯಾಜೆಟ್ ಗಳು, ಗೃಹೋಪಯೋಗಿ ಉಪಕರಣಗಳು, ಎಲೆಕ್ಟ್ರಾನಿಕ್ಸ್ ಗಳು, ಉಡುಪುಗಳು ಸೇರಿದಂತೆ ನಾನಾ ವಿಭಾಗಗಳ ಉತ್ಪನ್ನಗಳ ಮೇಲೆ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ದೊರಕುತ್ತದೆ.
ಫ್ಲಿಪ್ ಕಾರ್ಟ್ ನಲ್ಲಿ ಮಾಮೂಲಿ ದಿನಗಳಲ್ಲಿ ದೊರಕುವ ವಸ್ತುಗಳ ಬೆಲೆ ಬಿಬಿಡಿ ದಿನಗಳಲ್ಲಿ ಕಡಿಮೆ ಇರುತ್ತದೆ. ಮಾತ್ರವಲ್ಲದೇ ಈ ಬಾರಿ ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಮಹಿಂದ್ರಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮೂಲಕ ಖರೀದಿಸಿದರೆ ಶೇ. 10ರಷ್ಟು ತಕ್ಷಣದ ರಿಯಾಯಿತಿ ದೊರಕಲಿದೆ. ಅಲ್ಲದೇ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಶೇ. 10ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಇಎಂಐ ಖರೀದಿಗಳಿಗೂ ಶೇ. 10 ರ ರಿಯಾಯಿತಿ ದೊರಕುತ್ತದೆ.

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಉಳ್ಳವರಿಗೆ ಶೇ. 5ರಷ್ಟು ತಕ್ಷಣದ ರಿಯಾಯಿತಿ ಮತ್ತು ಶೇ. 5ರಷ್ಟು ಅನ್ ಲಿಮಿಟೆಟ್ ಕ್ಯಾಶ್ ಬ್ಯಾಕ್ ದೊರಕಲಿದೆ. ಪ್ರಮುಖ ಬ್ಯಾಂಕ್ ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಗೆ ಬಡ್ಡಿ ರಹಿತ ಇಎಂಐ ಸೌಲಭ್ಯ ಇರಲಿದೆ. ಐಫೋನ್ 14 ಗೆ ಭರ್ಜರಿ ರಿಯಾಯಿತಿ: ಬಿಬಿಡಿ ಸೇಲ್ ನಲ್ಲಿ ಐಫೋನ್ 14 ಅನ್ನು ಇದುವರೆಗಿನ ಅತ್ಯಂತ ಕಡಿಮೆ ಬೆಲೆಗೆ ನೀಡುವುದಾಗಿ ಫ್ಲಿಪ್ ಕಾರ್ಟ್ ವೆಬ್ ಸೈಟ್ ತಿಳಿಸಿದೆ. 40 ಸಾವಿರದಿಂದ 50 ಸಾವಿರದೊಳಗೆ ಅದರ ದರ ಇರಲಿದೆ. ಈಗ ಐಫೋನ್ 14ನ 128 ಜಿಬಿ ಆವೃತ್ತಿಯ ದರ 65 ಸಾವಿರ ರೂ. ಇದೆ.

ಐಫೋನ್ 14 ಪ್ಲಸ್ ದರ 128 ಜಿಬಿ ಮಾದರಿಗೆ ಈಗ 74 ಸಾವಿರ ರೂ. ಇದೆ. ಈ ಮಾದರಿಯು 50 ರಿಂದ 60 ಸಾವಿರದೊಳಗೆ ದೊರಕುವ ಸೂಚನೆಯನ್ನು ನೀಡಲಾಗಿದೆ. ಹೀಗಾಗಿ ಐಫೋನ್ 15 ಸರಣಿಯ ಫೋನ್ ಗಳು ತಮ್ಮ ಕೈಗೆಟುಕುವುದಿಲ್ಲ 14 ಸರಣಿಯ ಫೋನ್ ಗಳನ್ನಾದರೂ ಕೊಳ್ಳೋಣ ಎಂದುಕೊಂಡಿರುವ ಗ್ರಾಹಕರಿಗೆ ಇದು ಬಂಪರ್ ಆಫರ್ ಎನ್ನಬಹುದು. ಐಫೋನ್ 12 ಮಾದರಿ 32,999 ರೂ.ಗೆ ದೊರಕಲಿದೆ. ಈಗ ಇದರ 64 ಜಿಬಿ ಮಾದರಿಯ ದರ 49 ಸಾವಿರ ರೂ. ಇದೆ.  ಇನ್ನು ರೆಡ್ಮಿ ನೋಟ್ 12 ಪ್ರೊ 5ಜಿ ಫೋನ್ 17,999 ರೂ. ಗಳಿಗೇ ದೊರಕಲಿದೆ. ಸ್ಯಾಮ್ ಸಂಗ್ ಗೆಲಾಕ್ಸಿ ಎಸ್ 21 ಎಫ್ ಇ 29,999 ರೂ., ಎಫ್ 14 5ಜಿ 9,999 ರೂ., ಮೋಟೋ ಜಿ54 5ಜಿ (256 ಜಿಬಿ) 14,999 ರೂ.ಗೆ ದೊರಕಲಿದೆ.

Related Articles

Leave a Reply

Your email address will not be published. Required fields are marked *

error: Content is protected !!