main logo

ಉಡುಪಿಯ ಪ್ರಸಿದ್ಧ ಬಟ್ಟೆ ಅಂಗಡಿಯಲ್ಲಿ ಮಿಸ್‌ ಫೈರಿಂಗ್‌

ಉಡುಪಿಯ ಪ್ರಸಿದ್ಧ ಬಟ್ಟೆ ಅಂಗಡಿಯಲ್ಲಿ ಮಿಸ್‌ ಫೈರಿಂಗ್‌

ಅಷ್ಟಕ್ಕೂ ಅಂಗಡಿಯಲ್ಲಿ ಆಗಿದ್ದೇನು
ಸಿಬ್ಬಂದಿಗೆ ಗುಂಡೇಟು ತಗುಲಿ ಗಾಯ
ಉಡುಪಿ: ನಗರದ ಬನ್ನಂಜೆಯಲ್ಲಿರುವ ಪ್ರಸಿದ್ಧ ವಸ್ತ್ರ ಮಳಿಗೆ ಜಯಲಕ್ಷ್ಮೀ ಸಿಲ್ಕ್‌ ನಲ್ಲಿ ಮಿಸ್‌ ಫೈರಿಂಗ್ ಆಗಿ ಓರ್ವ ವ್ಯಕ್ತಿಗೆ ಗುಂಡು ತಗುಲಿದೆ. ಗುಂಡೇಟು ತಗುಲಿದ ಗಾಯಾಳುವನ್ನು ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್‌ ಪತ್ತೆಯಾಗಿತ್ತು. ಬಳಿಕ ಗನ್‌ ಎತ್ತಿಕೊಂಡು ಆಪರೇಟ್‌ ಮಾಡಿ ಪರೀಕ್ಷಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡೇಟು ತಗುಲಿತ್ತು.
ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ದೌಡಾಯಿಸಿದ್ದು, ಗನ್​ನ್ನು ವಶಕ್ಕೆ ಪಡೆದಿದ್ದಾರೆ. ಈ ಗನ್‌ ಯಾರದ್ದು? ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು ಎನ್ನುವುದರ ಕುರಿತು ತನಿಖೆ ಶುರುವಾಗಿದೆ. ಇಂತಹ ಘಟನೆ ಈ ಹಿಂದೆ ಕೂಡ ಜಯಲಕ್ಷ್ಮೀ ಸಿಲ್ಕ್ಸ್‌ನಲ್ಲಿ ನಡೆದಿತ್ತು ಎನ್ನಲಾಗಿದೆ. ಭೂಗತ ಪಾತಕಿಗಳು ಫೈರಿಂಗ್‌ ಮಾಡಿದ್ದರಂತೆ. ಇದೀಗ ಅಪರಿಚಿತರ ಗನ್​ ಸಿಕ್ಕಿದ್ದು, ಪರೀಕ್ಷಿಸಲು ಹೋದಾಗ ಮಿಸ್​ ಫೈರಿಂಗ್​ ಆಗಿದೆ.​

Related Articles

Leave a Reply

Your email address will not be published. Required fields are marked *

error: Content is protected !!