Site icon newsroomkannada.com

ಫೆ.17ರೊಳಗೆ ಎಚ್​ಎಸ್​ಆರ್​ಪಿ ಅಳವಡಿಸಿಕೊಳ್ಳದಿದ್ದಲ್ಲಿ 2 ಸಾವಿರ ರೂ. ದಂಡ

ಕರ್ನಾಟಕದ ಸಾರಿಗೆ ಇಲಾಖೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದೆ. ಅಳವಡಿಸಲು ನಿಗದಿ ಪಡಿಸಲಾಗಿದ್ದ ಗಡುವು ಸಮೀಪಿಸುತ್ತಿದ್ದರೂ ನಂಬರ್ ಪ್ಲೇಟ್ ಬದಲಾವಣೆಗೆ ವಾಹನ ಮಾಲೀಕರು ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿ ದಂಡ ವಿಧಿಸಲು ಮುಂದಾಗಿದೆ.
ನಿಗದಿಪಡಿಸಿರುವ ಗಡುವು ಅಂತ್ಯವಾಗಲು ಇನ್ನು 21 ದಿನಗಳಷ್ಟೇ ಬಾಕಿ ಉಳಿದಿವೆ. ಆದರೆ, ಈವರೆಗೆ ಬರೀ 10 ಲಕ್ಷ ವಾಹನಗಳಿಗಷ್ಟೇ ಎಚ್​ಎಸ್​ಆರ್​ಪಿ ಹಾಕಿಸಲಾಗಿದೆ. ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ದಂಡ ವಿಧಿಸಲಾಗುತ್ತದೆ. ಮೊದಲನೆ ಬಾರಿ ಸಿಕ್ಕಿಬಿದ್ದರೆ 1000 ರೂ. ಹಾಗೂ 2ನೇ ಬಾರಿ ಸಿಕ್ಕಿಬಿದ್ದರೆ 2000 ರೂ. ದಂಡ ಹಾಕಲು ಕಾನೂನಿನಲ್ಲಿ ಅವಕಾಶ ಇದೆ.

ಹೀಗಾಗಿ ಫೆ.17ರ ಒಳಗೆ ಹಳೇ ವಾಹನಗಳಿಗೆ ನಿಯಮದಂತೆ ಎಚ್​ಎಸ್​ಆರ್​ಪಿ ಅಳವಡಿಸಿಕೊಂಡು ದಂಡ ಕಟ್ಟುವುದರಿಂದ ಬಚಾವಾಗಿ ಎಂದು ವಾಹನ ಮಾಲೀಕರಿಗೆ ಸಾರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಫೆ.17ಕ್ಕೆ ಎಚ್​ಎಸ್​ಆರ್​ಪಿ ಗಡುವು ಮುಗಿಯುತ್ತಿದೆ. ಅಷ್ಟರಲ್ಲಿ ಹಾಕಿಸಿ ಕೊಳ್ಳದಿದ್ದರೆ ಸಂಚಾರ ಪೊಲೀಸರು ಹಾಗೂ ಆರ್​ಟಿಒ ಅಧಿಕಾರಿಗಳು ಜಂಟಿಯಾಗಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

Exit mobile version