main logo

ಸೆಕ್ಯುರಿಟಿ ಗಾರ್ಡ್’ಗೇ ಇಲ್ಲ ‘ಸೆಕ್ಯುರಿಟಿ’–ಭ್ರದ್ರತಾ ಸಿಬ್ಬಂದಿ ಮೇಲೆ ನಡೀತಾ ‘ಗ್ಯಾಂಗ್ ರೇಪ್’?

ಸೆಕ್ಯುರಿಟಿ ಗಾರ್ಡ್’ಗೇ ಇಲ್ಲ ‘ಸೆಕ್ಯುರಿಟಿ’–ಭ್ರದ್ರತಾ ಸಿಬ್ಬಂದಿ ಮೇಲೆ ನಡೀತಾ ‘ಗ್ಯಾಂಗ್ ರೇಪ್’?

ಗಾಜಿಯಾಬಾದ್: ತನ್ನ ಸೂಪರ್ ವೈಸರ್ ನಿಂದ ಅತ್ಯಾಚಾರಕ್ಕೊಳಗಾಗಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ 19 ವರ್ಷದ ಯುವತಿ ಸೋಮವಾರದಂದು (ಆ.29) ಮೃತಪಟ್ಟ ಘಟನೆ ನಡೆದಿದೆ.

ಗಾಜಿಯಾಬಾದ್ ನ ಹೌಸಿಂಗ್ ಸೊಸೈಟಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಜಾರ್ಖಂಡ್ ಮೂಲದ 19 ವರ್ಷದ ಯುವತಿಯ ಮೇಲೆ ಆಕೆಯ ಸೂಪರ್ ವೈಸರ್ ಅಜಯ್ ಎಂಬಾತ ಆದಿತ್ಯವಾರದಂದು (ಆ.27) ಅತ್ಯಾಚಾರ ನಡೆಸಿದ್ದ. ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಆ ಬಳಿಕ ಆಕೆಯ ಆರೋಗ್ಯ ಸ್ಥಿತಿ ಹದೆಗೆಟ್ಟ ಕಾರಣ ಆಕೆಯನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಆಕೆಗೆ ಚಿಕಿತ್ಸೆ ಫಲಕಾರಿಯಾಗಿದೆ ಸಂತ್ರಸ್ತೆ ಸೋಮವಾರದಂದು (ಆ.28) ಕೊನೆಯುಸಿರೆಳೆದಿದ್ದಾಳೆ.

ಜಾರ್ಖಂಡ್ ಮೂಲದವಳಾಗಿದ್ದ ಸಂತ್ರಸ್ತೆ ತನ್ನ ಸಂಬಂಧಿಕರ ಜೊತೆ ಹೌಸಿಂಗ್ ಸೊಸೈಟಿ ಸಮೀಪವೇ ನೆಲೆಸಿದ್ದಳು ಮತ್ತು ಇಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ, ಈ ಕೃತ್ಯವನ್ನು ಒಬ್ಬನೇ ಮಾಡಿಲ್ಲ, ಬದಲಾಗಿ ಮೂವರು ಈ ಅತ್ಯಾಚಾರವೆಸಗಿದ್ದಾರೆ  ಮಾತ್ರವಲ್ಲದೇ ಹೌಸಿಂಗ್ ಸೊಸೈಟಿಯ ತಳಮಹಡಿಯಲ್ಲಿಯೇ ಈ ದುಷ್ಕೃತ್ಯ ನಡೆದಿದೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಆದರೆ, ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದು, ಸಂತ್ರಸ್ತೆಯ ಕುಟುಂಬಸ್ಥರು ಆರೊಪಿಸುವ ಸ್ಥಳದ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅಲ್ಲಿ ಅಂತಹ ಯಾವುದೇ ಕೃತ್ಯ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಐಪಿಸಿ 376ರಡಿಯಲ್ಲಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನು, ಸಂತ್ರಸ್ತೆ ವಿಷ ಸೇವಿಸಿ ಸಾವಿಗೀಡಾಗಿದ್ದಾಳೋ ಅಥವಾ ಆಕೆಗಿದ್ದ ಶ್ವಾಸಕೋಶದ ಕಾಯಿಲೆಯಿಂದ ಮೃತಪಟ್ಟಿದ್ದಾಳೋ ಎಂಬುದನ್ನು ಪತ್ತೆಹಚ್ಚಲು ಆಕೆಯ ಪ್ರಮುಖ ಅಂಗಗಳನ್ನು ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗೆ ಕಳುಹಿಸಲಾಗಿದೆ ಎಂದು ಡಿಸಿಪಿ (ಗ್ರಾಮೀಣ) ವಿವೇಕ್ ಚಂದ್ ಯಾದವ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!