Site icon newsroomkannada.com

ಶಿವಮೊಗ್ಗ ಗಲಾಟೆ ಹಿಂದೆ‌ ಮತಾಂಧ ಶಕ್ತಿಗಳ ಕೈವಾಡ ಇದೆ- ನಳಿನ್ ಕುಮಾರ್ ಕಟೀಲ್

ಮಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಈದ್ ಮಿಲಾದ್ ಸಂಘರ್ಷವನ್ನ ಖಂಡಿಸುತ್ತೇನೆ. ಗಣೇಶ ಚತುರ್ಥಿ ಯಾವುದೇ ಗಲಾಟೆ ನಡೆಯದೇ ಶಾಂತಿಯುತವಾಗಿ ನಡೆದಿದೆ.ಆದರೆ ಶಿವಮೊಗ್ಗ ಗಲಾಟೆ ಹಿಂದೆ‌ ಮತಾಂಧ ಶಕ್ತಿಗಳ ಕೈವಾಡ ಇದೆ ಎಂದರು.

ಈದ್ ಮೆರವಣಿಗೆಯಲ್ಲಿ ಹಿಂದೂಗಳ ಅಂಗಡಿ, ಮನೆಗಳ ಮೇಲೆ ದಾಳಿಯಾಗಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈ ರೀತಿ ಆಗಿದೆ. ರಾಜ್ಯದಲ್ಲಿ ಪಾಕಿಸ್ತಾನ ಧ್ವಜ, ಪಾಕ್ ಪರ ಘೋಷಣೆ ಆಗ್ತಾ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಾಣ್ತಾ ಇವೆ ಎಂದರು.

ಮಂಗಳೂರು ಕುಕ್ಕರ್ ಬಾಂಬ್ ನಲ್ಲೂ ಶಿವಮೊಗ್ಗದ ನಂಟಿದೆ. ಭಟ್ಕಳ ಬ್ರದರ್ಸ್ ರೀತಿಯಲ್ಲಿ ತೀರ್ಥಹಳ್ಳಿ ಬ್ರದರ್ಸ್ ಮೂಲಕ ಚಟುವಟಿಕೆ ಆಗ್ತಿದೆ. ಸರ್ಕಾರ ‌ಕಠಿಣ ಕ್ರಮ ಕೈಗೊಳ್ಳದೇ ಶಾಂತಿ ಸುವ್ಯವಸ್ಥೆ ವಿಫಲವಾಗಿದೆ. ಈ ಘಟನೆಯಲ್ಲಿ ಆತಂಕವಾದದ ಸಾಧ್ಯತೆ ಇದೆಯಾ ಅಂತ ತನಿಖೆ ಮಾಡಬೇಕು ಎಂದರು.

ಇದರ ಪೂರ್ಣ ತನಿಖೆ‌ ಆಗಲಿ, ಇದು ಸರ್ಕಾರದ ಪೂರ್ಣ ವೈಫಲ್ಯ. ಸಿಎಂ ಮತಬೇಟೆಗಾಗಿ ಇದರ ವಿರುದ್ದ ಕ್ರಮ ಕೈಗೊಳ್ತಾ ಇಲ್ಲ. ಹರ್ಷ ಮತ್ತು ಪ್ರವೀಣ್ ಹತ್ಯೆ ಬಳಿಕ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತು. ಈ ಸರ್ಕಾರ ಸಣ್ಣ ಮಟ್ಟದ ರಾಜಕಾರಣ ಮಾಡ್ತಾ ಇದೆ. ತುಷ್ಟೀಕರಣ ನೀತಿ ಮೂಲಕ ಮತಾಂಧ ಶಕ್ತಿಗಳಿಗೆ‌ ಮತ್ತೆ ಧೈರ್ಯ ಬಂದಿದೆ. ಕೋಲಾರದಲ್ಲಿ ತಲ್ಬಾರ್ ದ್ವಾರ ಹಾಕಿದಾಗಲೇ ಇವರು ಎಚ್ಚೆತ್ತುಕೊಳ್ಳಬೇಕಿತ್ತು. ಐಎನ್ಡಿ ಒಕ್ಕೂಟ ಹಾಗೂ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದರು.

Exit mobile version