ಮಂಗಳೂರು: ಇಸ್ರೇಲ್ ಮೇಲೆ ಪ್ಯಾಲೆಸ್ಟೈನ್ ನ ಹಮಾಸ್ ಉಗ್ರರ ದಾಳಿ ನಡೆಸಿದ್ದು, ಸಾವಿರಾರು ಮಂದಿಯ ಮಾರಣ ಹೋಮ ನಡೆಸಿದ್ದಾರೆ. ಈ ನಡುವೆ ಉದ್ಯೋಗ ನಿಮಿತ್ತ ಇಸ್ರೇಲ್ ನಲ್ಲಿರುವ ಕರಾವಳಿಯ ಸಾವಿರಾರು ಜನ ಈ ಬೆಳವಣಿಗೆಯಿಂದ ಆತಂಕ ಎದುರಿಸುತ್ತಿದ್ದಾರೆ. ಅದೇರೀತಿ ಕಳೆದ 16 ವರ್ಷಗಳಿಂದ ಇಸ್ರೇಲ್ ನ ಟಲ್ ಅವೀವ್ ನೆಲೆಸಿರುವ ಮೂಲತಃ ಮಂಗಳೂರು ದಾಬಸ್ ಕಟ್ಟೆ ನಿವಾಸಿ ಪ್ರವಿಣ್ ಪಿಂಟೋ ಅವರ ಸುರಕ್ಷತೆ ಬಗ್ಗೆ ಅವರ ಕುಟುಂಬಸ್ಥರು ಫೋನ್ ಮೂಲಕ ವಿಚಾರಿಸುತ್ತಿದ್ದಾರೆ. ಪ್ರವೀಣ್ ಪಿಂಟೋ ಅವರು ಬಂಕರ್ ನಲ್ಲಿ ಸುರಕ್ಷಿತವಾಗಿದ್ದು, ಮನೆಯಿಂದ ಹೊರ ಬರದಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.