ತುಳುನಾಡಿನ ಅವಳಿ ವೀರ ಪುರುಷರಾದ ಕೊಟಿ-ಚೆನ್ನಯರ ತಾಯಿ, ಮಹಾಮಾತೆ ದೇಯಿ ಬೈದೆತಿಯ ಜನನ ಮತ್ತು ಆಕೆಯ ಜೀವನದ ಮೇಲೆ ಬೆಳಕು ಚೆಲ್ಲುವ ವಿಶಿಷ್ಟ ನೃತ್ಯ ರೂಪಕ.. ‘ಗೆಜ್ಜೆಗಿರಿತ ಬೊಲ್ಪು’ ಇತ್ತೀಚೆಗೆ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಯಶಸ್ವಿ ಪ್ರದರ್ಶನ ಕಂಡಿತು.
ಸುಧಾಕರ ಸುವರ್ಣ ಅವರ ಮೂಲ ಪರಿಕಲ್ಪನೆಯ ಈ ಕಥೆ, ಗುರು ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಅವರ ಸಮರ್ಥ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಹೊಸ ರೂಪು ಪಡೆದುಕೊಂಡು, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು ಇದರ ಪರಿಪಕ್ವ ಕಲಾವಿದರ ಒಗ್ಗೂಡುವಿಕೆಯಲ್ಲಿ ಮೂಡಿಬಂದ – ಮಹಾಮಾತೆ ದೇಯಿ ಬೈದೆತಿಯ ಜನನ ಮತ್ತು ಆಕೆಯ ಜೀವನದ ಮೇಲೆ ಬೆಳಕು ಚೆಲ್ಲುವ ವಿಶಿಷ್ಟ ನೃತ್ಯ ರೂಪಕ ‘ಗೆಜ್ಜೆಗಿರಿತ ಬೊಲ್ಪು’ ರಂಗ ಸಾಕ್ಷಾತ್ಕಾರದ ಅಪೂರ್ವ ಚಿತ್ರ ಸಂಚಯ ಇಲ್ಲಿದೆ..
Photo Credit: ಪ್ರಭು ಸ್ಟುಡಿಯೋ, ಪುತ್ತೂರು