ಬೆಂಗಳೂರು: ಬೆಂಗಳೂರಿನ 15 ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಪೊಲೀಸರು ಶಾಲೆಗಳಿಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇ-ಮೇಲ್ ಬೆದರಿಕೆ ಪ್ರತಿ ಟಿ9ಗೆ ಲಭ್ಯವಾಗಿದ್ದು, ಮುಜಾಹಿದ್ದಿನ್ ಹೆಸರಲ್ಲಿ ಬಾಂಬ್ ಬೆದರಿಕೆ ಮೇಲ್ ಬಂದಿದೆ. ‘ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ತಯಾರಿಗಿರಿ. ಇಲ್ಲ ಎಲ್ಲರೂ ಸಾಯಲು ಸಿದ್ಧರಾಗಿರಿ. ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಸಾಯಿಸುತ್ತೇವೆ. ನೀವೆಲ್ಲರೂ ಕೂಡ ಅಲ್ಲಾಹುವಿನ ವಿರೋಧಿಗಳು. ನೀವೆಲ್ಲರೂ ಸಾಯಲು ಸಿದ್ಧರಾಗಿರಿ ’ಎಂದು ಇಮೇಲ್ನಲ್ಲಿ ಬರೆಯಲಾಗಿದೆ.
ಆದ್ರೆ, ಮುಜಾಹಿದ್ದಿನ್ ಯಾರು? ಎಲ್ಲಿಂದ ಈ ಇ-ಮೇಲ್ ಬಂದಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಿಂದೂ-ಮುಸ್ಲಿಂ ಗಲಾಟೆಗಳ ಮಧ್ಯೆ ಈ ರೀತಿ ಬೆದರಿ ಹಾಕಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಹಿಂದೆ ಅನೇಕ ಬಾರಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಆದ್ರೆ, ಬಾರಿ ಉಗ್ರವಾದ ಪದಗಳೊಂದಿಗೆ ಬೆದರಿಕೆ ಬಂದಿದ್ದು, ಆರಂಕಕ್ಕೆ ಕಾರಣವಾಗಿದೆ. ಅಲ್ಲದೇ ಇದನ್ನು ಪೊಲಿಸರು ಗಂಭೀರವಾಗಿ ಪರಿಗಣಿಸಿದ್ದು, ಬಸವೇಶ್ವರ ನಗರದ ಶಾಲೆಯ ಮೂಲೆ ಮೂಲೆಯಲ್ಲಿ ತಪಾಸಣೆ ಮಾಡುತ್ತಿದ್ದಾರೆ.
ಶಾಲೆ ಮೈದಾನದಲ್ಲಿ ಸ್ಫೋಟಕಗಳನ್ನು ಇರಿಸಿದ್ದೇವೆ. ನವೆಂಬರ್ 26ರಂದು ಅಲ್ಲಾಹನ ಮಾರ್ಗದಲ್ಲಿ ನಮ್ಮ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು ಹತ್ಯೆ ಮಾಡಿದ್ದಾರೆ. ಲಕ್ಷಾಂತರ ಕಾಫಿರರ ಕುತ್ತಿಗೆಗೆ ಕತ್ತಿ ಹಿಡಿಯೋದರಲ್ಲಿ ಅವರು ಶಕ್ತಿಶಾಲಿಗಳಾಗಿದ್ದಾರೆ. ಅವನು ವಿಫಲನಾಗಿ ಬೀಳುತ್ತಾನೆ. ನೂರಾರು ಮುಜಾಹಿದ್ಗಳು ಅಲ್ಲಾಹನ ಮಾರ್ಗದಲ್ಲಿ ಹೋರಾಡಲು ಸಜ್ಜಾಗಿದ್ದೇವೆ. ನೀವೆಲ್ಲರೂ ಅಲ್ಲಾಹನ ಶತ್ರುಗಳು. ನಾವು ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಹತ್ಯೆ ಮಾಡುತ್ತೇವೆ. ನೀವು ನಮ್ಮ ಗುಲಾಮರಾಗದೆ ಬೇರೆ ಆಯ್ಕೆಗಳಿಲ್ಲ. ಅಲ್ಲಾಹನ ನೈಜ ಧರ್ಮವನ್ನು ಸ್ವೀಕರಿಸಿ. ಬಿಸ್ಮಿಲ್ಲಾಹ್, ನಾವು ಇಡೀ ಭಾರತದಲ್ಲಿ ಅಲ್ಲಾಹನ ನೈಜ ಧರ್ಮವನ್ನು ಎಲ್ಲೆಡೆ ಹರಡಲಿದ್ದೇವೆ. ನಾವು ನಿಮ್ಮ ಮೇಲೆ ದಾಳಿಕೋರರನ್ನು ಕಳಿಸಿದ್ದು,.ನಿಮ್ಮನ್ನು ಮುಳುಗಿಸಲು ಬರುತ್ತಿದ್ದೇವೆ. ಬಿಸ್ಮಿಲ್ಲಾಹ್, ನಾಳೆ ಪ್ರಪಂಚದಾದ್ಯಂತ ಸಾವಿರಾರು ಝಿಯೋನಿಸ್ಟ್ಗಳು ಸಾಯಲಿದ್ದಾರೆ. ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಇಸ್ಲಾಂನ ಅರಿತವಾದ ಖಡ್ಗಕ್ಕೆ ಸಿಲುಕಿ ಸಾಯಿರಿ. ಸತ್ಯನಿಷೇಧಿಗಳು ನಿಮ್ಮೆ ಮುಂದೆ ಸಿಕ್ಕಾಗ ಅವರ ಶಿರಚ್ಛೇದ ಮಾಡಿರಿ. ಶಿರಚ್ಛೇದ ಮಾಡಿರಿ ಹಾಗೂ ಅವರ ಎಲ್ಲಾ ಬೆರಳುಗಳನ್ನೂ ಕತ್ತರಿಸಿ. ಬಹುದೇವಾರಾಧಕರು ನಿಮ್ಮ ವಿರುದ್ಧ ಹೋರಾಟ ಮಾಡುವಂತೆ ನೀವೂ ಅವರ ವಿರುದ್ಧ ಹೋರಾಡಿರಿ. ಅಲ್ಲಾಹು ಅಕ್ಬರ್ ಎಂದು ಬೆದರಿಕೆ ಇಮೇಲ್ನಲ್ಲಿ ಉಲ್ಲೇಖವಾಗಿದೆ.