Site icon newsroomkannada.com

ಎತ್ತಿನಹೊಳೆಯಲ್ಲಿ ಕೃತಕ ಜಲಸ್ಫೋಟ: ಮನೆಗಳಿಗೆ ನುಗ್ಗಿದ ನೀರು

ಸಕಲೇಶಪುರ: ಎತ್ತಿನ ಹೊಳೆ ಯೋಜನೆ ಆರಂಭದಿಂದಲೂ ಒಂದಲ್ಲ ಒಂದು ರೀತಿಯ ವಿವಾದಕ್ಕೆ ಈಡಾಗಿದೆ. ಇದೀಗ ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಯ ಪ್ರಯೋಗಿಕ ಹಂತದ ಚಾಲನೆ ವೇಳೆ ಮತ್ತೆ ನೀರು ಸೋರಿಕೆಯಾಗಿದ್ದು ಹಾಸನದ ಹೆಬ್ಬಸಾಲೆ ಗ್ರಾ. ಪಂ ವ್ಯಾಪ್ತಿಯ ದೇಖ್ಲಾವು ಸಂಪೂರ್ಣ ಕೆಸರುಮಯವಾಗಿದೆ.
ಪೈಪ್ ನಿಂದ ಹೊರಬಂದ ಭಾರೀ ಪ್ರಮಾಣದ ನೀರು ಹಲವು ಮನೆಗಳಿಗೆ ನುಗ್ಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಅಷ್ಟೇ ಅಲ್ಲದೇ ಈ ಊರಿನ ರಸ್ತೆ ಸಂಪೂರ್ಣ ಕೆಸರಿನಿಂದ ತುಂಬಿದ್ದು ಗ್ರಾಮದ ಜನರ ಸಂಚಾರಕ್ಕೂ ತೊಡಕು ಉಂಟಾಗಿದೆ.ೆ ಈ ಹಿಂದೆಯೂ ಹಾರ್ಲೆ ಕೂಡಿಗೆ ಸಮೀಪ ಪರೀಕ್ಷಾರ್ಥ ವೇಳೆ ನೀರು ಹರಿದು ಬಂದಿದ್ದು ಅಪಾರ ಹಾನಿ ಉಂಟಾಗಿತ್ತು. ಈಗ ಮತ್ತೆ ಈ ಹಾನಿ ಉಂಟಾಗಿರುವುದರಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

Exit mobile version