ಲಂಡನ್: ಲುಟಾನ್ನಿಂದ ಐಬಿಜಾಗೆ ತೆರಳುತ್ತಿದ್ದ ಈಜಿಜೆಟ್ ನ ಶೌಚಾಲಯದಲ್ಲಿ ಜೋಡಿಯೊಂದು ರತಿ ಕ್ರಿಯೆಯಲ್ಲಿದ್ದಾಗ ಕ್ಯಾಬಿನ್ ಸಿಬ್ಬಂದಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿರುವ ಘಟನೆಯ ವಿಡಿಯೋವೊಂದು ಸೆರೆಯಾಗಿದ್ದು, ಇದೀಗ ಈ ವಿಡಿಯೋ ‘ಎಕ್ಸ್’ ನಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ 08 ರಂದು ಸೆರೆಹಿಡಿಯಲಾದ ವಿಡಿಯೋದಲ್ಲಿ, ಫ್ಲೈಟ್ ಅಟೆಂಡೆಂಟ್ ಶೌಚಾಲಯದ ಬಾಗಿಲು ತೆರೆಯುವುದನ್ನು ತೋರಿಸಿದೆ, ಮತ್ತು ಆ ಸಂದರ್ಭದಲ್ಲಿ ಫುಲ್ ಹೀಟ್ ಗೆ ಬಂದಿದ್ದ ಜೋಡಿಯೊಂದು ಶೌಚಾಲಯದಲ್ಲೇ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿದ್ದರು.
ಇದನ್ನು ಕಂಡ ವಿಮಾನ ಸಿಬ್ಬಂದಿ ಶಾಕ್ ಗೊಳಗಾಗಿ ಕಿರುಚುತ್ತಿರುವುದು ವಿಡಿಯೋದಲ್ಲಿದೆ. ಈ ವೇಳೆ ಶೌಚಾಲಯದ ಬಾಗಿಲು ತೆರೆದುಕೊಂಡಿದ್ದು, ದಂಪತಿ ಇರಬಾರದ ಭಂಗಿಯಲ್ಲಿ ಇರುವುದು ಕಂಡುಬಂದಿದೆ.
ಇದೇ ವೇಳೆ ಶೌಚಾಲಯದ ಬಾಗಿಲು ತೆಗೆದುಕೊಂಡ ಕಾರಣ ಅರೆಬರೆ ಬಟ್ಟೆಯಲ್ಲಿದ್ದ ಯುವತಿ ‘ಓ ಮೈ ಗಾಡ್..’ ಎಂದು ತನ್ನೊಂದಿಗಿದ್ದಾತನೊಂದಿಗೆ ಕಿರುಚುತ್ತಾಳೆ.
Couple BUSTED having sex on Packed Plane to Ibiza
We’d love to hear your thoughts! ⬇️
Passengers aboard an easyJet flight from Luton to Ibiza on September 8 were left astounded when a couple’s amorous encounter inside the plane’s lavatory was exposed, creating quite a… pic.twitter.com/ENdMQUGwsW
— URECOMM (@URECOMM) September 12, 2023
ಈ ಅನಿರೀಕ್ಷಿತ ಘಟನೆಯಿಂದ ಕ್ಯಾಬಿನ್ ಸಿಬ್ಬಂದಿ, ಕೆಲವು ಪ್ರಯಾಣಿಕರು ಮುಜುಗರಕ್ಕೊಳಗಾದರು ಇನ್ನು ಕೆಲವರು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಚಪ್ಪಾಳೆ ತಟ್ಟುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.
ನಂತರ ವಿಮಾನವು ಐಬಿಜಾದಲ್ಲಿ ಇಳಿದಿದ್ದು, ದಂಪತಿಯನ್ನು ಪೊಲೀಸರು ವಿಮಾನದಿಂದ ಹೊರಕ್ಕೆ ಕರೆದೊಯ್ದಿದ್ದಾರೆ.
ವಿಮಾನದಲ್ಲಿ ಲೈಂಗಿಕತೆ ನಡೆಸುವ ವಿಚಾರದಲ್ಲಿ ಯಾವುದೇ ಸ್ಪಷ್ಟ ಕಾನೂನು ಇಂಗ್ಲೆಂಡ್ ನಲ್ಲಿ ಇಲ್ಲದಿದ್ದರೂ, ಲೈಂಗಿಕ ಅಪರಾಧಗಳ ಕಾಯಿದೆ 2004 ರ ಸೆಕ್ಷನ್ 71 ರ ಅಡಿಯಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಉದ್ದೇಶಪೂರ್ವಕವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಪರಾಧವಾಗಿದೆ.