ರಾಬಾತ್: ಮೊರಾಕೊದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಕನಿಷ್ಠ 296 ಮಂದಿ ಸಾವನ್ನಪ್ಪಿದ್ದು 153 ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಮೊರಾಕೊ ಆಂತರಿಕ ಸಚಿವಾಲಯ ಹೇಳಿದೆ.
ಮೊರೊಕನ್ನರು ಕಟ್ಟಡಗಳು ನೆಲಸಮಗೊಂಡು ಧೂಳಿನಿಂದ ಆವೃತವಾಗಿರುವುದನ್ನು ತೋರಿಸಿವೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಮರಕೆಚ್‌ನಲ್ಲಿರುವ ಹಳೆಯ ನಗರದ ಸುತ್ತಲೂ ಇರುವ ಪ್ರಸಿದ್ಧ ಕೆಂಪು ಗೋಡೆಗಳ ಭಾಗಗಳು ಹಾನಿಗೊಳಗಾಗಿವೆ. ಈ ಪ್ರದೇಶದಲ್ಲಿ ಪ್ರವಾಸಿಗರು ಕಿರಿಚುವ ವಿಡಿಯೊಗಳು ಹರಿದಾಡಿವೆ. ರಾತ್ರಿ 11:11ಕ್ಕೆ ಭೂಕಂಪವು ಸಂಭವಿಸಿದಾಗ 6.8 ರ ಪ್ರಾಥಮಿಕ ತೀವ್ರತೆಯನ್ನು ಹೊಂದಿದ್ದು, ಹಲವಾರು ಸೆಕೆಂಡುಗಳ ಕಾಲ ನಡುಗಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಮೊರಾಕೊದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‌ವರ್ಕ್ ಇದನ್ನು ರಿಕ್ಟರ್ ಮಾಪಕದಲ್ಲಿ ತೀವ್ರತೆಯ ಪ್ರಮಾಣವನ್ನು 7 ಎಂದು ಹೇಳಿದೆ. ಮೊರಾಕೊದಲ್ಲಿ ಆಗಾಗ್ಗೆ ಭೂಕಂಪನಗಳು ಸಂಭವಿಸುತ್ತಿದ್ದು 1960ರಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದರು. ಶುಕ್ರವಾರದ ಕಂಪನದ ಕೇಂದ್ರಬಿಂದುವು ಅಟ್ಲಾಸ್ ಪರ್ವತಗಳಲ್ಲಿ ಮರ್ಕೆಕ್‌ನಿಂದ ಸುಮಾರು 43.5 ಮೈಲುಗಳಷ್ಟು ದೂರದಲ್ಲಿತ್ತು.