main logo

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಭೂಕಂಪದಿಂದ 320 ಮಂದಿ ಸಾವು, ಸಾವಿರಕ್ಕೂ ಹೆಚ್ಚು ಮಂದಿಗೆ ಗಾಯ

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಭೂಕಂಪದಿಂದ 320 ಮಂದಿ ಸಾವು, ಸಾವಿರಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್: ಆಘಾತಕಾರಿ ಘಟನೆಯೊಂದರಲ್ಲಿ ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸುಮಾರು 11 ಗಂಟೆ ವೇಳೆಗೆ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, 320 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳುವಂತೆ, ಭೂಕುಸಿತಗಳು ಮತ್ತು ಕಟ್ಟಡ ಕುಸಿತದ ವರದಿಗಳ ಮಧ್ಯೆ ಸಾವಿನ ಸಂಖ್ಯೆ ಹೆಚ್ಚಾಗಬಹುದು.

ಭೂಕಂಪನವು ಪ್ರದೇಶದ ಅತಿದೊಡ್ಡ ನಗರವಾದ ಹೆರಾತ್‌ನ ವಾಯುವ್ಯಕ್ಕೆ 40 ಕಿಲೋಮೀಟರ್ (25 ಮೈಲುಗಳು) ದೂರದಲ್ಲಿದೆ. ಪ್ರಮುಖ ಕಂಪನವು 5.5, 4.7, 6.3, 5.9 ಮತ್ತು 4.6 ರ ತೀವ್ರತೆಯೊಂದಿಗೆ ಸಂಭವಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ, ನಿವಾಸಿಗಳು ಮತ್ತು ವ್ಯಾಪಾರಿಗಳ ಗುಂಪು ನಗರದಲ್ಲಿ ಕಟ್ಟಡಗಳಿಂದ ಓಡಿ ಹೋಗುತ್ತಿರುವುದನ್ನು ಕಾಣಬಹುದು. “ನಾವು ನಮ್ಮ ಕಚೇರಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕಟ್ಟಡ ಅಲುಗಾಡಲಾರಂಭಿಸಿತು. ವಾಲ್ ಪ್ಲಾಸ್ಟರ್‌ಗಳು ಬೀಳಲು ಪ್ರಾರಂಭಿಸಿದವು ಮತ್ತು ಗೋಡೆಗಳು ಬಿರುಕು ಬಿಟ್ಟವು, ಕೆಲವು ಗೋಡೆಗಳು ಮತ್ತು ಕಟ್ಟಡದ ಭಾಗಗಳು ಕುಸಿದವು” ಎಂದು 45 ವರ್ಷದ ಹೆರಾತ್ ನಿವಾಸಿ ಬಶೀರ್ ಅಹ್ಮದ್ ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.
ಗ್ರಾಮೀಣ ಮತ್ತು ಪರ್ವತ ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸಿವೆ” ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರು ಹೇಳಿದ್ದಾಗಿ ವರದಿ ಮಾಡಿದೆ. ಪ್ರಸ್ತುತ, ನಮ್ಮ ಬಳಿ ಎಲ್ಲಾ ಮಾಹಿತಿ ಮತ್ತು ವಿವರಗಳಿಲ್ಲ ಎಂದು ಅವರು ಹೇಳಿದರು. ಅದಾಗ್ಯೂ, USGS ಪ್ರಾಥಮಿಕ ವರದಿಯು ನೂರಾರು ಸಾವುನೋವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳುತ್ತದೆ.

Related Articles

Leave a Reply

Your email address will not be published. Required fields are marked *

error: Content is protected !!