ಬೇಕಾದ ಸಾಮಗ್ರಿಗಳು: ಈರುಳ್ಳಿ-1, ಟೊಮೆಟೊ -1, ಮೆಣಸು-8, ಕೊತ್ತಂಬರಿ – 3 ಚಮಚ, ಜೀರಿಗೆ ಹುಡಿ – 1 ಚಮಚ , ಹುಳಿ- ಸ್ವಲ್ಪ, ಅರಶಿನ- 1/2 ಚಮಚ, ಬೆಳ್ಳುಳ್ಳಿ- ಮೂರು ಎಸಲು, ತೆಂಗಿನ ತುರಿ -1/2 ಕಪ್, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಒಣ ಮೀನನ್ನು ಸ್ವಲ್ಪ ಹೊತ್ತು ನೀರಲ್ಲಿ ಹಾಕಿಡಿ,ನಂತರ ಸ್ವಚ್ಚಗೊಳಿಸಿ. ಈಗ ಬನಾಲೆಗೆ ಒಣಮೆಣಸು ಮತ್ತು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ, ನಂತರ ಕೊತ್ತಂಬರಿ, ಜೀರಿಗೆ ಹುಡಿ ಹಾಕಿ ಉರಿದು ಕೊಳ್ಳಿ ನಂತರ ಹುಳಿ ಹಾಕಿಕೊಳ್ಳಿ, ಮತ್ತೆ ಮಿಕ್ಸಿ ಜಾರಿಗೆ ತೆಂಗಿನ ತುರಿ ,ಅರಶಿನ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ರುಬ್ಬಿದಂತ ಮಸಾಲೆಯನ್ನ ಪಾತ್ರಕ್ಕೆ ಹಾಕಿಕೊಂಡು ಈರುಳ್ಳಿ, ಟೊಮೆಟೊ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಹಾಕಿ ಹದ ಮಾಡಿ ಸ್ವಲ್ಪ ಹೊತ್ತು ಕುದಿಸಿ, ನಂತರ ಒಣ ಮೀನನ್ನು ಹಾಕಿಕೊಂಡು ಐದು ನಿಮಿಷ ಕುದಿಯಲು ಬಿಡಿ, ಈಗ ರುಚಿಕರವಾದ ಮಂಗಳೂರು ಶೈಲಿಯ ಒಣ ಮೀನು ಸಾರು ಸಿದ್ದ.