Site icon newsroomkannada.com

ಬರೋಬ್ಬರಿ 29 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್‌ ವಶ

ಗುವಾಹಟಿ: ಅಸ್ಸಾಂ ರೈಫಲ್ಸ್ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳು ಶನಿವಾರ ರಾತ್ರಿ ಮಿಜೋರಾಂನಲ್ಲಿಕಾರ್ಯಾಚರಣೆ ನಡೆಸಿ ಮ್ಯಾನ್ಮಾರ್‌ನಿಂದ ದೇಶದೊಳಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ

₹ 29 ಕೋಟಿ ಮೌಲ್ಯದ ಹೆರಾಯಿನ್ ಮತ್ತು ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರು ಜನರನ್ನು ಬಂಧಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಅಸ್ಸಾಂ ರೈಫಲ್ಸ್‌ನ ಐಜ್ವಾಲ್ ಬೆಟಾಲಿಯನ್ ಮತ್ತು ಐಜ್ವಾಲ್‌ನ ಮಾದಕ ದ್ರವ್ಯ ನಿಗ್ರಹ ದಳವು ಶನಿವಾರ ರಾತ್ರಿ ಮಿಜೋರಾಂನ ಸೈಚುವಲ್ ಜಿಲ್ಲೆಯ ಸೈಚಲ್ ಗ್ರಾಮದಲ್ಲಿ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಹಿಡಿದು ₹ 25 ಕೋಟಿ ಮೌಲ್ಯದ 5 ಕೆಜಿ ಹೆರಾಯಿನ್ ಹೊಂದಿದ್ದ 436 ಸೋಪ್ ಕೇಸ್‌ಗಳನ್ನು ವಶಪಡಿಸಿಕೊಂಡಿವೆ.
ಅದೇ ರೀತಿ ಮಿಜೋರಾಂ ಪೊಲೀಸರು ಚಂಫೈ ಜಿಲ್ಲೆಯ ಚಲ್ಬವಿಹಾ ಜಂಕ್ಷನ್ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಮೂವರನ್ನು ಬಂಧಿಸಿ ₹ 1.75 ಕೋಟಿ ಮೌಲ್ಯದ 1.3 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಮೂರನೇ ಘಟನೆಯಲ್ಲಿ, ಅಸ್ಸಾಂ ರೈಫಲ್ಸ್ ಮತ್ತು ಮಿಜೋರಾಂ ಪೊಲೀಸರು ಚಂಪೈ ಜಿಲ್ಲೆಯ ಝೋಟೆ ಗ್ರಾಮದ ಹೊರವಲಯದಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ₹ 80 ಲಕ್ಷ ಮೌಲ್ಯದ 73 ಗ್ರಾಂ ಹೆರಾಯಿನ್‌ ಸಾಗಿಸುತ್ತಿರುವುದನ್ನು ಪತ್ತೆಹಚ್ಚಿದ್ದಾರೆ.

Exit mobile version