main logo

ಬರಪಟ್ಟಿ ಬಿಡುಗಡೆ: ಕರಾವಳಿಯ ಈ ಎಲ್ಲ ತಾಲೂಕುಗಳು ಬರಪೀಡಿತ

ಬರಪಟ್ಟಿ ಬಿಡುಗಡೆ: ಕರಾವಳಿಯ ಈ ಎಲ್ಲ ತಾಲೂಕುಗಳು ಬರಪೀಡಿತ

ಬೆಂಗಳೂರು: ಕೇಂದ್ರ ಸರ್ಕಾರದ ಬರ ಮಾನದಂಡಗಳ ಅನುಸಾರ ಹೆಚ್ಚುವರಿಯಾಗಿ 21 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಿಸಿದೆ. ಅಲ್ಲದೆ, 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.
161 ಬರಪೀಡಿತ ತಾಲೂಕುಗಳ ಪಟ್ಟಿಗೆ ಹೆಚ್ಚುವರಿಯಾಗಿ 21 ತಾಲೂಕುಗಳ ಸೇರ್ಪಡೆಯಾಗಿದೆ. ಅಂದರೆ ಒಟ್ಟು 182 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಣೆಯಾದಂತೆ ಆಗಿದೆ. ಇನ್ನು 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಘೋಷಿಸಲ್ಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಇರುವ 236 ತಾಲೂಕುಗಳ ಪೈಕಿ 208 ತಾಲೂಕುಗಳು ಈಗ ಬರಕ್ಕೆ ಒಳಗಾಗಿವೆ. ಅಂದರೆ, ಈಗ ಬರದಿಂದ ಬಾಕಿ ಉಳಿದಿರುವುದು ಕೇವಲ 28 ತಾಲೂಕುಗಳು ಮಾತ್ರ! ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಈ ಆದೇಶವನ್ನು ಹೊರಡಿಸಿದ್ದಾರೆ.

ಚಾಮರಾಜನಗರ, ಯಳಂದೂರು, ಕೆ.ಆರ್.ನಗರ, ಬೆಳಗಾವಿ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾಂವಿ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸಿಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ, ದಾಂಡೇಲಿ ತಾಲೂಕುಗಳು ಸಂಪೂರ್ಣ ಬರಪೀಡಿತವಾಗಿವೆ.

ಬೆಂಗಳೂರು ಉತ್ತರ, ಚನ್ನಪಟ್ಟಣ, ಮಾಗಡಿ, ಮಾಲೂರು, ತುಮಕೂರು,‌ ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ದೇವದುರ್ಗ, ಮಸ್ಕಿ, ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಚನ್ನರಾಯಪಟ್ಟಣ, ಸೋಮವಾರಪೇಟೆ, ಕೊಪ್ಪ,ನರಸಿಂಹರಾಜಪುರ, ಶೃಂಗೇರಿ, ಮಂಗಳೂರು,‌ ಮೂಡಬಿದರೆ, ಬ್ರಹ್ಮಾವರ, ಕಾರವಾರ ತಾಲೂಕುಗಳು ಸಾಧಾರಣ ಬರಪೀಡಿತವಾಗಿವೆ ಎಂದು ಸರ್ಕಾರ ಘೋಷಣೆ ಮಾಡಿದೆ.

Related Articles

Leave a Reply

Your email address will not be published. Required fields are marked *

error: Content is protected !!