ಬೆಳ್ತಂಗಡಿ: ಕಲ್ಮಂಜ ಗ್ರಾಮದ ಶಾಲಾ ಬಳಿ ನಿವಾಸಿ ಉಜಿರೆಯಲ್ಲಿ ಮಂಜುನಾಥ ಮೋಟಾರು ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದ ಬಾಲಕೃಷ್ಣ ಶೆಣೈ (56) ಹೃದಯಾಘಾತದಿಂದ ಜು.3ರಂದು ಮಧ್ಯಾಹ್ನ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಮಧ್ಯಾಹ್ನ ಊಟದ ಬಳಿಕ ಉಜಿರೆಯ ತನ್ನ ಕಚೇರಿಯಲ್ಲಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಉಜಿರೆಯಲ್ಲಿ 20 ವರ್ಷಗಳ ಹಿಂದೆ ಮೊದಲ ಡ್ರೈವಿಂಗ್ ಸ್ಕೂಲ್ ಆರಂಭಿಸಿದ ಅವರು ಕಿಟ್ಟು ಎಂದೇ ಪರಿಚಿತರಾಗಿದ್ದರು. ಸಾವಿರಾರು ಮಂದಿಗೆ ಚಾಲನಾ ತರಬೇತಿ ನೀಡಿದ್ದು, ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.