Site icon newsroomkannada.com

MANGALORE: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ನಿರ್ಧಾರ

ಮಂಗಳೂರು: ದೈವ, ದೇವಸ್ಥಾನ ಮತ್ತು ಸಂಸ್ಕೃತಿ ರಕ್ಷಣೆ ಸಂಬಂಧ‌ ಹಿಂದೂ ಜನಜಾಗೃತಿ ಸಮಿತಿ ಮಂಗಳೂರಿನಲ್ಲಿ ದೇವಸ್ಥಾನಗಳ ಪರಿಷತ್ ಸಭೆ ನಡೆಸಿದೆ. ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ದೈವ, ದೇವಾಲಯಗಳ ಪಾವಿತ್ರತೆ, ವಸ್ತ್ರ ಸಂಹಿತೆ, ದೇವಾಲಯಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 200ಕ್ಕೂ ಹೆಚ್ಚು ದೇವಾಲಯ, ದೈವಸ್ಥಾನಗಳ ವಿಶ್ವಸ್ಥರು ಭಾಗಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಕಟ್ಟು ನಿಟ್ಟಾಗಿ ವಸ್ತ್ರ ಸಂಹಿತೆ ಜಾರಿಗೆ ತರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ದಕ್ಷಿಣ ಕನ್ನಡದ 100 ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ತೀರ್ಮಾನಿಸಲಾಯಿತು. ಫೆಬ್ರವರಿ ತಿಂಗಳಲ್ಲಿ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಅಲ್ಲದೇ ಪ್ರತಿ ದೇವಾಲಯಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದು. ಧಾರ್ಮಿಕ ಪಾಠದ ಮೂರು ತಿಂಗಳ ಕೋರ್ಸ್​​ನ್ನು ಹಿಂದೂ ಜನಜಾಗೃತಿ ಸಮಿತಿ ಸಿದ್ದ ಪಡಿಸಿದೆ. ಈ ಕೋರ್ಸ್​ನಲ್ಲಿ ಹಿಂದೂ‌ ಧರ್ಮ, ದೇವರುಗಳ, ಆಚಾರ ವಿಚಾರ, ಸಂಸ್ಕೃತಿ, ಪದ್ದತಿ, ಪರಂಪರೆಗಳ ಬಗ್ಗೆ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಇನ್ನು ವಾರಕ್ಕೆ ಒಂದು ದಿನ ಪ್ರತಿ ದೇವಾಲಯಗಳಲ್ಲಿ ಧಾರ್ಮಿಕ ಪಾಠ ನಡೆಸಬೇಕು. ದೇವಾಲಯಗಳ ಮೂಲಕ ಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡಲು ನಿರ್ಣಯಿಸಲಾಯಿತು.

Exit mobile version