main logo

ಬಜ್ಪೆ: ರಾತ್ರಿ ವೇಳೆ ಮನೆಯವರು ಮಲಗಿದ್ದ ವೇಳೆ ತಾಯಿ, ಮಗು ನಾಪತ್ತೆ

ಬಜ್ಪೆ: ರಾತ್ರಿ ವೇಳೆ ಮನೆಯವರು ಮಲಗಿದ್ದ ವೇಳೆ ತಾಯಿ, ಮಗು ನಾಪತ್ತೆ

ಮಂಗಳೂರು: ಬಜಪೆ ಕೆ.ಪಿ.ನಗರದಲ್ಲಿ ತಾಯಿ ತನ್ನ ಸಣ್ಣ ಮಗುವಿನ ಜೊತೆಗೆ ನಾಪತ್ತೆಯಾಗಿದ್ದು ಬಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಪಿ ನಗರದ ಶಾಹಿಸ್ತ ಮಂಜೀಲ್‌ನ ಅಹ್ಮದ್ ಮನ್ಸೂದ್ ಎಂಬವರ ಪತ್ನಿ ಶರೀನಾ ವೈ. (24) ಮತ್ತು ಮೂರು ವರ್ಷದ ಮಗ ಮಹ್ಮದ್ ತೋಹಾರ್ ಡಿ.11ರಂದು ರಾತ್ರಿ ಕಾಣೆಯಾಗಿದ್ದಾರೆ. ಅಹ್ಮದ್ ಮನ್ಸೂದ್ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದು 6 ವರ್ಷಗಳ ಹಿಂದೆ ಸುಳ್ಯದ ಯೂಸುಫ್ ಅವರ ಪುತ್ರಿ ಶರಿನಾ (24) ಅವರನ್ನು ವಿವಾಹವಾಗಿದ್ದರು. ಇವರಿಗೆ 3 ವರ್ಷದ ಮಗುವಿದ್ದು, ಸದ್ಯ ಶರೀನಾ 5 ತಿಂಗಳ ಗರ್ಭಿಣಿ, ದಂಪತಿ ಅನ್ನೋನ್ಯವಾಗಿದ್ದು ಡಿ. 11ರಂದು ರಾತ್ರಿ ಎಲ್ಲರೂ ಮಲಗಿದ್ದಾಗ ಮಧ್ಯರಾತ್ರಿ 2.45ರ ಸುಮಾರಿಗೆ ಶರೀನಾ ಪುತ್ರನೊಂದಿಗೆ ಮನೆ ಬಿಟ್ಟು ಹೋಗಿದ್ದರು. ಮರುದಿನ ಬೆಳಗ್ಗೆ ಮನೆಯ ಎದುರಿನ ಸಿಸಿ ಕೆಮರಾ ಪರಿಶೀಲಿಸಿದಾಗ ಮನೆ ಬಿಟ್ಟು ಹೋಗಿರುವುದು ದೃಢಪಟ್ಟಿದೆ.

ಶರೀನಾ ಬಟ್ಟೆಬರೆ ಹಾಗೂ 5 ಗ್ರಾಂ ಚಿನ್ನದ ಆಭರಣ ತೆಗೆದುಕೊಂಡು ಹೋಗಿದ್ದು ತಾಯಿ ಮನೆಗೆ ಹೋಗುತ್ತಿರುವುದಾಗಿ ಬ್ಯಾರಿ ಭಾಷೆಯಲ್ಲಿ ಚೀಟಿ ಬರೆದಿಟ್ಟು ಹೋಗಿದ್ದಾರೆ. ಆದರೆ ಅವರ ತಾಯಿಗೆ ಫೋನ್ ಮಾಡಿ ವಿಚಾರಿಸಿದಾಗ ಅಲ್ಲಿಗೆ ತಲುಪಿರಲಿಲ್ಲ. ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಹ್ಮದ್ ಮಕ್ಯೂದ್ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!