ಪಣಜಿ: ಗೋವಾದಲ್ಲಿ ಕಪ್ಪೆ ಮಾಂಸ ಭಕ್ಷಣೆ ಸಾಮಾನ್ಯವಾಗಿದ್ದು, ಕಪ್ಪೆ ಕರಿ, ಕಪ್ಪೆ ಕಾಲಿನ ಮಾಂಸ ಸೇವನೆ ಹೆಚ್ಚಿದೆ. ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಪ್ಪೆ ಮಾಂಸ ಸೇವನೆ ಬಿಡುವಂತೆ ಸಿಎಂ ಪ್ರಮೋದ್ ಸಾವಂತ್ ಸಲಹೆ ನೀಡಿದ್ದಾರೆ.
ಕಪ್ಪೆಗಳನ್ನು ರಕ್ಷಿಸುವ ಬಗ್ಗೆ ದಕ್ಷಿಣ ಗೋವಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಾವು ಪರಿಸರದಲ್ಲಿ ಸಮತೋಲನಕ್ಕಾಗಿ ಕಪ್ಪೆ ಸಂತತಿಯನ್ನು ಕಾಯ್ದುಕೊಳ್ಳಬೇಕಿದೆ ಎಂದರು. ಕಪ್ಪೆಗಳನ್ನು ಬೇಟೆಯಾಡುವವರನ್ನು ನಾವು ಬಂಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಕಪ್ಪೆ ಮಾಂಸ ಬದಲಿಗೆ ಕೋಳಿ ಮಾಂಸ ತಿನ್ನಿರಿ ಎಂದು ಸಲಹೆ ನೀಡಿದರು. ಗೋವಾ ರೆಸ್ಟೊರೆಂಟ್‌ಗಳಲ್ಲಿ”ಜಂಪಿಂಗ್ ಚಿಕನ್” ಎಂದು ಕರೆಯಲ್ಪಡುವ ಕಪ್ಪೆ ಮಾಂಸ ಭಾರಿ ಪ್ರಸಿದ್ಧವಾಗಿದ್ದು, ಈ ನಿಟ್ಟಿನಲ್ಲಿ ಸಿಎಂ ಹೇಳಿಕೆ ಮಹತ್ವ ಪಡೆದಿದೆ.
ಅಲ್ಲದೆ ಕೃಷಿ ಕೃಷಿ ಸಚಿವ ರವಿನಾಯ್ಕ ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದು, “ಕಪ್ಪೆಗಳನ್ನು ಕೊಲ್ಲುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಅವುಗಳನ್ನು ಬೇಟೆಯಾಡುವವರನ್ನು ಬಂಧಿಸಲು ನಮ್ಮಲ್ಲಿ ಕಾನೂನು ಇದೆ” ಎಂದು ತಿಳಿಸಿದ್ದಾರೆ.