Site icon newsroomkannada.com

ಡೊನಾಲ್ಡ್​ ಟ್ರಂಪ್ ವಿರುದ್ಧ ಸರ್ಕಾರದ ಗೌಪ್ಯ ದಾಖಲೆ ಇಟ್ಟುಕೊಂಡಿರುವ ಆರೋಪ

Donald Trump is accused of keeping secret government records
ಬೆಂಗಳೂರು: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿರುದ್ಧ ಸರ್ಕಾರದ ಗೌಪ್ಯ ದಾಖಲೆಗಳನ್ನು ಇಟ್ಟುಕೊಂಡಿರುವ ಆರೋಪ ಕೇಳಿಬಂದಿದೆ. ಅವರ ವಿರುದ್ದ ದೋಷಾರೋಪಣೆ ಹೊರಿಸಲಾಗಿದ್ದು, ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ. ಮುಂದಿನ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್‌ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಗೂ ಮುನ್ನ ಅಮೆರಿಕದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಗಮನ ಸೆಳೆಯುತ್ತಿವೆ. ಇದು ಟ್ರಂಪ್‌ಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಶ್ವೇತಭವನದಿಂದ ಹೊರಬಂದ ನಂತರವೂ ಟ್ರಂಪ್ ತಮ್ಮ ಬಳಿ ನೂರಾರು ರಹಸ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಸುಳ್ಳು ಹೇಳಿಕೆಗಳನ್ನೂ ನೀಡಿದ್ದಾರೆ. ತನಿಖಾ ಸಂಸ್ಥೆಗಳು ಟ್ರಂಪ್ ವಿರುದ್ಧ ಏಳು ಕೇಂದ್ರೀಯ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಟ್ರಂಪ್ ಮಾಜಿ ಅಧ್ಯಕ್ಷರಷ್ಟೇ ಅಲ್ಲ, 2024ರ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಗಾದಿಗೆ ಸ್ಪರ್ಧೆ ಮಾಡುವ ಮೂಲಕ ಅಧ್ಯಕ್ಷ ಜೋ ಬೈಡನ್ ಅವರನ್ನು ಎದುರಿಸಲು ಮುಂಚೂಣಿಯಲ್ಲಿದ್ದಾರೆ.
ತಮ್ಮ ನಡುವಿನ ಸಂಬಂಧ ಬಹಿರಂಗಪಡಿಸದಂತೆ 2016ಕ್ಕೂ ಮುನ್ನ ಪೋರ್ನ್​ ಸ್ಟಾರ್​ಗೆ ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ ವಿರುದ್ಧ 30ಕ್ಕೂ ಹೆಚ್ಚು ಅಪರಾಧ ಆರೋಪಗಳನ್ನು ದಾಖಲಿಸಿದ ಎರಡು ತಿಂಗಳ ನಂತರ ಮತ್ತೊಂದು ಆರೋಪಹೊರಿಸಲಾಗಿದೆ.
Exit mobile version