main logo

ಕ್ರಿಕೆಟ್‌ ಸ್ಟಾರ್‌ ವಿರಾಟ್‌ ಕೊಹ್ಲಿ ಕುಡಿಯುವ ನೀರು ಎಲ್ಲಿಂದ ಬರುತ್ತೆ ಗೊತ್ತಾ?

ಕ್ರಿಕೆಟ್‌ ಸ್ಟಾರ್‌ ವಿರಾಟ್‌ ಕೊಹ್ಲಿ ಕುಡಿಯುವ ನೀರು ಎಲ್ಲಿಂದ ಬರುತ್ತೆ ಗೊತ್ತಾ?

ನವದೆಹಲಿ: ಟೀಂ ಇಂಡಿಯಾ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ದೇಶದ ತಂಡದಲ್ಲಿಯೇ ಅತ್ಯಂತ ಫಿಟ್‌ ಆಗಿರುವ ಆಟಗಾರ. ಸದ್ಯ ಸಂಪೂರ್ಣ ಸಸ್ಯಹಾರಿಯಾಗಿ ಬದಲಾಗಿರುವ ವಿರಾಟ್ ಕೊಹ್ಲಿ, ಕ್ರಿಕೆಟ್‌ ಇಲ್ಲದ ಸಮಯದಲ್ಲಿ ಸಾಕಷ್ಟು ಜಿಮ್‌ನಲ್ಲಿ ಕಸರತ್ತು ನಡೆಸುತ್ತಾರೆ. ಹೀಗಾಗಿಯೇ ವಿರಾಟ್ ತಮ್ಮ 34ನೇ ವಯಸ್ಸಿನಲ್ಲಿಯೂ ಇಷ್ಟು ಫಿಟ್ ಆಗಿರುವುದು.

ಇನ್ನು ವಿರಾಟ್ ಕೊಹ್ಲಿ ಕುಡಿಯುವ ನೀರು ನಮ್ಮ ದೇಶದಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ವಿರಾಟ್ ಕೊಹ್ಲಿ ತಮ್ಮ ಕುಡಿಯುವ ನೀರನ್ನು ಫ್ರಾನ್ಸ್ ದೇಶದಿಂದ ತರಿಸಿಕೊಳ್ಳುತ್ತಾರೆ. ಅವರು ಕುಡಿಯವ ಆ ಒಂದು ಲೀಟರ್‌ ಬೆಲೆ ಕೇಳಿದರೆ ನಿಮಗೂ ಅಚ್ಚರಿಯಾಗಬಹುದು. ವಿರಾಟ್ ಕೊಹ್ಲಿ ತಾವು ಕುಡಿಯಲು ‘ಎವಿಯನ್’ ಎನ್ನುವ ನೈಸರ್ಗಿಕ ನೀರನ್ನು ಫ್ರಾನ್ಸ್‌ನಿಂದ ತರಿಸಿಕೊಳ್ಳುತ್ತಾರೆ.

ಇದರ ಒಂದು ಲೀಟರ್ ನೀರಿನ ಬೆಲೆ ಭಾರತೀಯ ರುಪಾಯಿಗಳ ಲೆಕ್ಕದಲ್ಲಿ 4 ಸಾವಿರ ರುಪಾಯಿಗಳಾಗಿವೆ. ‘ಎವಿಯನ್’ ಎನ್ನುವ ನೈಸರ್ಗಿಕ ನೀರನ್ನು ಜಗತ್ತಿನ ಅತ್ಯಂತ ಪರಿಶುದ್ಧ ನೀರಾಗಿದೆ. ಯೂರೋಪಿನ ಅತಿದೊಡ್ಡ ಸರೋವರವಾದ ಎವಿಯನ್ ಲೆಸ್ ಬೈನ್ಸ್ ಮೂಲದ ಪರಿಶುದ್ದ ನೀರನ್ನು ವಿರಾಟ್ ಕೊಹ್ಲಿ ತಾವು ಕುಡಿಯಲು ಉಪಯೋಗಿಸುತ್ತಾರೆ.

Related Articles

Leave a Reply

Your email address will not be published. Required fields are marked *

error: Content is protected !!