Site icon newsroomkannada.com

ಪ್ರೀತಿಸಲು ನಿರಾಕರಿಸಿದ ಯುವಕನಿಗೆ ಹೀಗಾ ಮಾಡೋದು: ಪೊದೆಗಳಿಂದ ಆವೃತವಾದ ಏಕಾಂತ ಸ್ಥಳಕ್ಕೆ ಕರೆಸಿಕೊಂಡ ಯುವತಿ ಆತನಿಗೆ ಮಾಡಿದ್ದೇನು

Do this to the young man who refused to love: What did the young woman do to him who was called to a secluded place surrounded by bushes.

ಜಾರ್ಖಂಡ್‌: ಪ್ರೀತಿಸುವಂತೆ ಹುಡುಗರು ಹುಡುಗಿಯರ ಹಿಂದೆ ಬಿದ್ದು, ನಾನಾ ರೀತಿಯ ತೊಂದರೆ ಕೊಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಅದಕ್ಕೆ ವಿರುದ್ಧ ವಾದ ಘಟನೆ ನಡೆದಿದೆ,
ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವತಿ ಆತ ನಿದ್ರೆಯಲ್ಲಿದ್ದಾಗ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಅಂಜಲಿ ಕುಮಾರ್(20) ಎಂದು ಗುರುತಿಸಲಾದ ಆರೋಪಿಯು ತನ್ನ 24 ವರ್ಷದ ಗೆಳೆಯ ಧರ್ಮೆನ್ ಓರಾನ್‌ ನಿದ್ದೆ ಮಾಡುತ್ತಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ.
ಜಾರ್ಖಂಡ್‌ನ ಪಲಾಮು ಜಿಲ್ಲೆಯ ಪಟಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲ್ಹುವಾ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯನ್ನು ಸೋಮವಾರ ಬಂಧಿಸಲಾಗಿದ್ದು, ಆಕೆಯ ರಕ್ತದ ಕಲೆಯುಳ್ಳ ಬಟ್ಟೆ ಮತ್ತು ಕೊಲೆಗೆ ಬಳಸಿದ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಸುರ್ಜೀತ್ ಕುಮಾರ್ ತಿಳಿಸಿದ್ದಾರೆ.
ಅಂಜಲಿಯು ಧರ್ಮನ್ ಜೊತೆ ಸಂಬಂಧ ಹೊಂದಿದ್ದಳು ಮತ್ತು ಆತನನ್ನು ಮದುವೆಯಾಗಲು ಬಯಸಿದ್ದಳು. ಆದರೂ ಆತ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದ. ನಂತರ ಜಿಗುಪ್ಸೆಗೊಂಡ ಅಂಜಲಿ ಕೊಲೆಗೆ ಯೋಜನೆ ರೂಪಿಸಿ ಧರ್ಮನ್‌ನನ್ನು ಶನಿವಾರ ಪೊದೆಗಳಿಂದ ಆವೃತವಾದ ಏಕಾಂತ ಸ್ಥಳಕ್ಕೆ ಕರೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಲ್ಪ ಹೊತ್ತು ಮಾತನಾಡಿದ ನಂತರ ಧರ್ಮೇನ್ ನೆಲದ ಮೇಲೆ ಮಲಗಿದ್ದ ಅದೇ ಸಂದರ್ಭದಲ್ಲಿ ಅಂಜಲಿ ಅಲ್ಲೇ ಇದ್ದ ಕೊಡಲಿಯಿಂದ ಧರ್ಮನ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಳೆ.

ಕೊಲೆ ಮಾಡಿದ ಬಳಿಕ ಅಂಜಲಿ ಶವವನ್ನು ಪೊದೆಯಲ್ಲಿ ಬಚ್ಚಿಟ್ಟು ಸ್ಥಳದಿಂದ ತೆರಳಿದ್ದಳು. ಭಾನುವಾರ ಶವವನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. 48 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version