main logo

ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದ ಒಳಗಡೆ ನುಗ್ಗಿದ ಕೊಳಚೆ ನೀರು: ಭಕ್ತರ ಆಕ್ರೋಶ

ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದ ಒಳಗಡೆ ನುಗ್ಗಿದ ಕೊಳಚೆ ನೀರು: ಭಕ್ತರ ಆಕ್ರೋಶ

ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಗರ್ಭಗುಡಿಯ ಸುತ್ತಲೂ ಮೊಣಕಾಲಿನ ತನಕ ಮಳೆನೀರು ನುಗ್ಗಿದ ಪರಿಣಾಮ ಇಂದು ಸಂಕಷ್ಟಿ ಆಚರಿಸುವ ಶ್ರದ್ಧಾಳುಗಳು ದೇವರ ಪ್ರದಕ್ಷಿಣೆ ಬರಲು ಕಷ್ಟಪಡುವಂತಾಯಿತು.

ಇಷ್ಟು ವರ್ಷದಲ್ಲಿ ಇರದ ಸಮಸ್ಯೆ ಈಗಿನ ಮೂರು ವರ್ಷಗಳ ಲ್ಲಿ ಹೆಚ್ಚಾಗುತ್ತಿದೆ. ಕಾರಣ ರಾಷ್ಟ್ರೀಯ ಹೆದ್ದಾರಿ ಅಸರ್ಮಪಕ ಕಾಮಗಾರಿ. ಸಮರ್ಪಕವಾದ ಚರಂಡಿ ಗಳಿಲ್ಲದೆ ರಸ್ತೆಯ ನೀರು, ಹೋಟೆಲ್ ಗಳನೀರು ಅಲ್ಲದೇ ಪೇಟೆಯ ಎಲ್ಲಾ ಮಲಿನ ನೀರು ದೇವಸ್ಥಾನದ ಒಳಗಡೆ ಬಂದು ಶೇಖರಣೆ ಆಗುತ್ತದೆ. ಇದರಿಂದ ಭಕ್ತರಿಗೆ ದೇವಸ್ಥಾನದ ಒಳಗಡೆ ಬರಲು ಮುಜುಗರ ವಾಗುತ್ತದೆ ಅಲ್ಲದೆ ಈ ಬಗ್ಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು, ಪಂಚಾಯತ್ ಅಲ್ಲದೆ ಶಾಸಕರಿಗೂ ಮನನ ಮಾಡಿಯಾಗಿದೆ ಯಾರೂ ಈ ಸಮಸ್ಯೆ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ ಎಂದು ದೇವಸ್ಥಾನದ ಮುಖ್ಯ ಅರ್ಚಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!