ಅತೀ ಕಡಿಮೆ ಸಮಯದಲ್ಲಿ ಮಾಡಬಹುದಾದ ತಿಂಡಿಗಳಲ್ಲಿ ಚಿತ್ರಾನ್ನವು ಒಂದು. ಆದ್ದರಿಂದ ಮಹಿಳೆಯರು ಹೆಚ್ಚು ಈ ತಿಂಡಿಯನ್ನು ಬೆಳಗ್ಗಿನ ಉಪಾಹಾರಕ್ಕೆ ಆಯ್ಕೆ ಮಾಡಬಹುದು.
ಚಿತ್ರಾನ್ನ ಮಾಡಲು ಮೊದಲಿಗೆ ಹುರಿದುಕೊಂಡ ಕೆಂಪು ಮೆಣಸಿನಕಾಯಿ, ತೆಂಗಿನ ತುರಿ, ಸಾಸಿವೆ, ಹುಣಸೆ ಹಣ್ಣು ಮತ್ತು ಬೆಲ್ಲವನ್ನು ಮಿಕ್ಸರ್ ಪಾತ್ರೆಯಲ್ಲಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಬಳಿಕ ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಸೇರಿಸಿ, ಹುರಿಯಿರಿ. ನಂತರ ಶೇಂಗಾ ಸೇರಿಸಿ ಹುರಿಯಿರಿ. ತದನಂತರ ಅರಿಶಿನ, ಇಂಗು, ಕರಿಬೇವಿನ ಎಲೆಗಳನ್ನು ಸೇರಿಸಿ, ರುಬ್ಬಿಕೊಂಡ ತೆಂಗಿನ ತುರಿಯನ್ನು ಹಾಕಿ ಮಿಶ್ರಣ ಮಾಡಿ ಎರಡರಿಂದ ಮೂರು ನಿಮಿಷ ಹುರಿಯಲು ಬಿಡಿ. ಈ ಮಿಶ್ರಣಕ್ಕೆ ಅನ್ನ ಮತ್ತು ಉಪ್ಪನ್ನು ಸೇರಿಸಿ.ಈಗ ರುಚಿಕರವಾದ ಚಿತ್ರಾನ್ನ ಸವಿಯಲು ಸಿದ್ದ.