newsroomkannada.com

ಮೀನುಗಾರರಿಗೆ ಸಿಕ್ತು ರಾಶಿ-ರಾಶಿ ಬೊಂಡಾಸ್ : ಮೀನು ಪ್ರಿಯರಿಗೆ ಸುಗ್ಗಿ

ಉಡುಪಿ: ಆಳ ಸಮುದ್ರ ಮೀನುಗಾರಿಕೆ ಆರಂಭವಾಗಿ, ಮೀನಿನ ಸುಗ್ಗಿ ಶುರುವಾಗಿದೆ. ಮೀನುಗಾರರು ಬೀಸುವ ಬಲೆಗೆ ಯಥೇಚ್ಛವಾಗಿ ಬೋಂಡಾಸ್  ಮೀನುಗಳು ಬೀಳುತ್ತಿದ್ದು, ಬೊಂಡಾಸ್‌ನಿಂದ ಮೀನುಗಾರಿಗೆ ಬಂಪರ್ ಹೊಡೆದಿದೆ.

ಆಳ ಸಮುದ್ರಕ್ಕೆ ತೆರಳಿದ  ಬೋಟ್‌ಗಳು ಆಕ್ಟೊಪ್ಲಸ್ ತಳಿಯ ಬೊಂಡಾಸ್ ಹೊತ್ತು ತರುತ್ತಿದೆ. ಮಲ್ಪೆ ಬಂದರಿನ ಹರಾಜು ಕೇಂದ್ರಗಳಲ್ಲಿ ಬೊಂಡಾಸ್ ರಾಶಿಗಳೇ ಕಾಣ‌‌ಸಿಗುತ್ತದೆ.

ಕಳೆದ ಬಾರಿ ಇದೇ ರೀತಿ ಬಂಗುಡೆ ಮೀನಿಗಳು ಸಿಗುತ್ತಿದ್ರೆ, ಈ ಬಾರಿ ಬೊಂಡಾಸ್ ಮೀನುಗಳು ಹೇರಳ ಪ್ರಮಾಣದಲ್ಲಿ ಸಿಗುತ್ತಿದೆ. ಬೊಂಡಾಸ್ ಮೀನು ಇತರೆ ಮೀನುಗಳಿಗಿಂತ ನೋಡಲು ಆಕಾರದಲ್ಲಿ ಭಿನ್ನವಾಗಿದ್ದು, ಆಕ್ಟೊಪಸ್ ರೀತಿ ಇರುತ್ತದೆ.

ಸಾಮಾನ್ಯ ದಿನಗಳಲ್ಲಿ ಬೊಂಡಾಸ್ ಮೀನು ಒಂದು ಕೆ.ಜಿ.ಗೆ 400 ರೂಪಾಯಿಗಳಂತೆ ಮಾರಾಟಗೊಳ್ಳುತ್ತಿದ್ದರೆ, ಇದೀಗ ರಾಶಿ‌ ರಾಶಿ ಬೊಂಡಾಸ್ ಬರುತ್ತಿರುವ ಕಾರಣ ಇದರ ದರ ಕೆ.ಜಿ.ಗೆ 70 ರಿಂದ 90 ರೂಪಾಯಿಗಳಿಗೆ ಇಳಿದಿದೆ.

ಬೊಂಡಾಸ್ ಮೀನು ಸುಕ್ಕ ಮಾಡಿ ತಿಂದ್ರೆ ಟೆಸ್ಟ್ ಜಾಸ್ತಿ ಆನ್ನೋದು ಮೀನು ಪ್ರೀಯರ‌ ಅಭಿಪ್ರಾಯ.


Exit mobile version