Site icon newsroomkannada.com

ಬಾವಿಗೆ ಹಾರಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ನಗುಮೊಗದ ಯುವಕನ ಸಾವಿಗೆ ಕಾರಣವಾಗಿದ್ದೇನು?

ವಿಟ್ಲ: ಬಿಜೆಪಿ ಕಾರ್ಯಕರ್ತರೊಬ್ಬರು ಬಾವಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪೆರಾಜೆ ಎಂಬಲ್ಲಿ ನಡೆದಿದೆ. ಪೆರಾಜೆ ನಿವಾಸಿ ಪ್ರಶಾಂತ್ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬುಧವಾರ ತಡರಾತ್ರಿ ಸುಮಾರು 2 ಗಂಟೆಯ ಬಳಿಕ ಈತ ಬಾವಿಗೆ ಹಾರಿರಬೇಕು ಎಂದು ಹೇಳಲಾಗುತ್ತಿದೆ. ಪ್ರಶಾಂತ್ ಅವರ ದೊಡ್ಡಮ್ಮ ವಾರಗಳ ಹಿಂದೆ ತೀರಿಕೊಂಡಿದ್ದು,ಅವರ ಉತ್ತರಕ್ರಿಯೆ ಕಾರ್ಯಕ್ರಮ ನಿನ್ನೆ ಬುಧವಾರ ಇವರ ಮನೆಯಲ್ಲಿ ನಡೆದಿತ್ತು.

ಆ ಬಳಿಕ ರಾತ್ರಿ ಕೂಡ ಅದೇ ವಿಚಾರವಾಗಿ ಕಾರ್ಯಕ್ರಮದ ಊಟ ಮಾಡಿ ಸ್ನೇಹಿತರ ಹಾಗೂ ಸಂಬಂಧಿಕರು ಹೋದ ಬಳಿಕ ಎಲ್ಲರು ಮನೆಯಲ್ಲಿ ಮಲಗಿದ್ದರು. ಅದೇ ಸಮಯದಲ್ಲಿ ಈತ ಮನೆಯಿಂದ ಹೊರಗೆ ಬಂದು ಮನೆಯ ಸಮೀಪದ ಬಾವಿಗೆ ಹಾರಿರಬೇಕು ಎಂದು ‌ಶಂಕಿಸಲಾಗಿದೆ.

ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಕಳೆದ ಒಂದು ವರ್ಷಗಳ ಹಿಂದೆ ಮದುವೆಯಾಗಿದ್ದ. ಸದಾ ನಗುಮೊಗದ ಪ್ರಶಾಂತ್ ಎಲ್ಲರೊಂದಿಗೆ ಸ್ನೇಹ ಜೀವಿಯಾಗಿದ್ದುಕೊಂಡಿದ್ದ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದ. ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ಪೆರಾಜೆ ಯುವ ವೇದಿಕೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಇದೀಗ ಸದಸ್ಯನಾಗಿ ಸೇವೆ ಮಾಡುತ್ತಿದ್ದ. ಸ್ಥಳಕ್ಕೆ ವಿಟ್ಲ ಪೋಲೀಸರು ಆಗಮಿಸಿದ್ದು, ಬಂಟ್ವಾಳ ಅಗ್ನಿ ಶಾಮಕ ದಳ ಹಾಗೂ ಗೂಡಿನ ಬಳಿಯ ಮುಳುಗುತಜ್ಞರು ಆಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

Exit mobile version