ವಿಟ್ಲ: ಕಾಲುಸಂಕ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಚರಂಡಿಗೆ ಬಿದ್ದು, ಮೃತಪಟ್ಟ ಘಟನೆ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ನಡೆದಿದೆ. ಪುಣಚ ಗ್ರಾಮದ ಮಾಯಿಲ ಮೂಲೆ ನಿವಾಸಿ ಕೇಶವ ನಾಯ್ಕ ಎಂ. (51) ಮೃತಪಟ್ಟವರು. ಪರಿಯಾಲ್ತಡ್ಕ ದಲ್ಲಿರುವ ತನ್ನ ಬಾಡಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮನೆಯ ಬಳಿಯ ಚಿಕ್ಕ ಚರಂಡಿಗೆ ಇರುವ ಕಾಲುಸಂಕ ದಾಟುತ್ತಿರುವ ವೇಳೆ ಆಕಸ್ಮಿಕವಾಗಿ ಕವುಚಿ ಬಿದ್ದು ಮೇಲೇಳಲಾರದೆ ಮೃತಪಟ್ಟಿದ್ದಾರೆ. ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.