ರಾಯ್ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿಯ ಹಳ್ಳಿಯೊಂದರಲ್ಲಿ ಐದು ಮಕ್ಕಳು ತಮ್ಮ ಮನೆಯ ಸಮೀಪವಿರುವ ಕೊಳದಲ್ಲಿ ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಯ್ ಬರೇಲಿ ಪೊಲೀಸ್ ಅಧೀಕ್ಷಕ (ಎಸ್ಪಿ), ಅಲೋಕ್ ಪ್ರಿಯದರ್ಶಿ ಮಾತನಾಡಿ, ನಾಲ್ವರು ಹುಡುಗಿಯರು ಮತ್ತು ಒಬ್ಬ ಹುಡುಗ ಸೇರಿದಂತೆ – ಆಗಾಗ್ಗೆ ಕೊಳದಲ್ಲಿ ಆಟವಾಡುತ್ತಿದ್ದರು. ಆದರೆ, ಶನಿವಾರ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಕೆರೆಯಲ್ಲಿ ಆಳದ ನೀರಿಗೆ ಜಾರಿದ್ದಾರೆ. ಮಂಗ್ಟಾ ಡೇರಾ ಗ್ರಾಮದ ನಿವಾಸಿಗಳಾದ ವೈಶಾಲಿ (12) ಸೋನಮ್, (10) ರೂಪಾಲಿ,( 9) ರಿತು,( 8) ಮತ್ತು ಅಮಿತ್, (8) ಎಂದು ಗುರುತಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.