Site icon newsroomkannada.com

ಬೆಳ್ತಂಗಡಿ: ರಿಕ್ಷಾ ಡಿಕ್ಕಿಯಾಗಿ ಮೂರು ವರ್ಷದ ಮಗು ಕೌಶಿಕ್‌ ಮೃತ್ಯು

ಬೆಳ್ತಂಗಡಿ: ಸೋಣಂದೂರು ಪಣಕಜೆಯಲ್ಲಿ ರಿಕ್ಷಾ ಡಿಕ್ಕಿಯಾಗಿ ಮೂರು ವರ್ಷದ ಮಗು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಕೌಶಿಕ್‌ ಮೃತಪಟ್ಟ ಮಗು ಎಂದು ತಿಳಿದುಬಂದಿದೆ.
ಮುಂಡಾಡಿಯಲ್ಲಿ ಚಂದ್ರಶೇಖರ್‌ ಅವರ ಮನೆ ರಸ್ತೆ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ರಸ್ತೆಗೆ ಓಡಿ ಬಂದಿದೆ ಎನ್ನಲಾಗಿದೆ. ಈ ವೇಳೆ ಮಗುವಿಗೆ ರಿಕ್ಷಾ ತಾಗಿ ಗಂಭೀರ ಗಾಯಗೊಂಡಿದ್ದು ಮಗುವನ್ನು ಕೂಡಲೇ ಉಜಿರೆ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗದೇ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version