ಕೊಟ್ಟಯಂ: ಕೇರಳದ ಕೊಟ್ಟಯಂನ ಪಂಪಡಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಖ್ಯಾತ ನಟ ವಿನೋದ್ ಥಾಮಸ್ ಮೃತದೇಹ ಪತ್ತೆಯಾಗಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಹೋಟೆಲ್ ಅಂಗಳದಲ್ಲಿ ನಿಲ್ಲಿಸಲಾಗಿರುವ ಕಾರಿನಲ್ಲಿ ಬಹಳ ಸಮಯದಿಂದ ಒಬ್ಬ ವ್ಯಕ್ತಿ ಇದ್ದಾರೆ ಎಂದು ಹೋಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ‘ಕಾರಿನಲ್ಲಿ ಒಬ್ಬ ವ್ಯಕ್ತಿ ಇರುವುದನ್ನು ನಾವು ಗಮನಿಸಿದೆವು. ಬಾಗಿಲು ತೆಗೆದು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದವು. ಅಲ್ಲಿ ಅವರನ್ನು ಪರೀಕ್ಷೆ ನಡೆಸಿದ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ದೃಡಪಡಿಸಿದರು’ ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಅವರು ಹೇಳಿದ್ದಾರೆ.
ಥಾಮಸ್ ಅವರು ‘ಅಯ್ಯಪ್ಪನುಮ್ ಕೊಶ್ಯುಮ್’, ‘ನಾಥೋಲಿ ಒರು ಚೆರಿಯ ಮೀನಲ್ಲಾ’, ‘ಒರು ಮುರೈ ವಂತ್ ಪಾಠಯಾ’, ‘ಹ್ಯಾಪಿ ವೆಡ್ಡಿಂಗ್’ ಮತ್ತು ‘ಜೂನ್’ ಇವೇ ಮುಂತಾದ ಚಲನಚಿತ್ರಗಳ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದಾರೆ.