Site icon newsroomkannada.com

ಕೊಳೆತ ಸ್ಥಿತಿಯಲ್ಲಿ ನಿವೃತ್ತ ಕಸ್ಟಮ್ಸ್ ಅಧಿಕಾರಿ ಮೃತದೇಹ ಪತ್ತೆ

ಉಡುಪಿ: ಮಣಿಪಾಲದ ನರಸಿಂಗೆ ದೇವಸ್ಥಾನದ ಬಳಿ ಕೊಳೆತ ಸ್ಥಿತಿಯಲ್ಲಿ ಶವ ಕಂಡುಬಂದಿದ್ದು, ನಿತ್ಯಾನಂದ ಒಳಕಾಡುಹಾಗೂ ಮಣಿಪಾಲ ಪೊಲೀಸರ ಸಹಕಾರದಿಂದ ಪತ್ತೆಹಚ್ಚಲಾಯಿತು. ಮೃತರನ್ನು ಕಾರವಾರ ಮತ್ತು ಕೊಚ್ಚಿನ್‌ನ ಕಸ್ಟಮ್ಸ್‌ನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಪೆರ್ಡೂರು ಗೋಪಾಲ್ ನಾಯಕ್ (83) ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಹಲವು ವರ್ಷಗಳಿಂದ ಇವರೊಬ್ಬರೇ ವಾಸವಿದ್ದರು. ವಾರದ ಹಿಂದೆಯಯಷ್ಟೇ ಅವರ ಪುತ್ರಿ ಭೇಟಿ ಮಾಡಿ ತೆರಳಿದ್ದರು ಎನ್ನಲಾಗಿದೆ. ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

Exit mobile version