ಅಯೋಧ್ಯೆ: ಫೋನ್ ನಲ್ಲಿ ಬಾಯ್ ಫ್ರೆಂಡ್‌ನೊಂದಿಗೆ ಅತಿಯಾಗಿ ಮಾತನಾಡಬೇಡ ಎಂದ ತಂದೆ ವಿರುದ್ಧವೇ 19 ವರ್ಷದ ಯುವತಿಯೊಬ್ಬಳು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾಳೆ.
ಮಂಗಳವಾರ ರಾತ್ರಿ ಜಮುನಿಯಮಾವು ಗ್ರಾಮದ ಯುವತಿ ತನ್ನ ಗೆಳೆಯನೊಂದಿಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಆಕೆಯ ತಂದೆ ಮಾತನಾಡದಂತೆ ಹೇಳಿದ್ದು, ಯುವತಿ ಮೇಲೆ ನಿಗಾ ಇಡುವಂತೆ ಕುಟುಂಬದ ಸದಸ್ಯರಿಗೆ ಸೂಚಿಸಿದ್ದರು. ಇದರಿಂದ ಯುವತಿ ಕೋಪಗೊಂಡಿದ್ದು, ಮರುದಿನ ಬೆಳಿಗ್ಗೆ ಅವಳು ತನ್ನ ಗೆಳೆಯನನ್ನು ಕರೆದುಕೊಂಡು ರುದೌಲಿ ಪೊಲೀಸ್ ಠಾಣೆಯಲ್ಲಿ ತಂದೆ ವಿರುದ್ಧ ದೂರು ದಾಖಲಿಸಿದ್ದಾಳೆ.
ನನಗೆ ದೂರು ನೋಡಿ ಆಶ್ಚರ್ಯವಾಯಿತು. ಈ ಬಗ್ಗೆ ಅವಳ ತಂದೆಯನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದೇವೆ. ಅಲ್ಲದೆ ತಂದೆಯೊಂದಿಗೆ ಮಾತುಕತೆ ನಡೆಸುವಂತೆ ಸಲಹೆ ನೀಡಿದೆವು. ಆದರೆ ಯುವತಿ ತಾನು ವಯಸ್ಕಳಾಗಿದ್ದು, ನನಗೆ ತಂದೆಯಿಂದ ಸಮಸ್ಯೆಯಾಗಿದೆ. ಪ್ರಕರಣ ದಾಖಲಿಸದಿದ್ದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ ಕಾರಣ ಎಫ್‌ಐಆರ್ ದಾಖಲಿಸಿದ್ದೇವೆ. ಆಕೆಯ ದೂರಿನ ಮೇರೆಗೆ ಕೊಲೆ ಬೆದರಿಕೆ ಎಫ್‌ಐಆರ್ ದಾಖಲಿಸಲಾಗಿದೆ. ಶಾಂತಿ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಿ, ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.