Site icon newsroomkannada.com

ತಕ್ಷಣ ಅಣಬೆ ಫ್ಯಾಕ್ಟರಿ ಬಂದ್‌ ಮಾಡುವಂತೆ ದಕ್ಷಿಣ ಕನ್ನಡ ಡಿಸಿ ರವಿಕುಮಾರ್‌ ಆದೇಶ

ಮಂಗಳೂರು: ಮಂಗಳೂರು ನಗರದ ಹೊರವಲಯದ ಆಶ್ರಯ ನಗರದ ಬಳಿ ಕಾರ್ಯಾಚರಿಸುತ್ತಿರುವ ಅಣಬೆ ಫ್ಯಾಕ್ಟರಿಯನ್ನು ತಕ್ಷಣ ಬಂದ್‌ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಭಾನುವಾರ ವಾಮಂಜೂರಿನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅವರು ಜನರ ಅಹವಾಲು ಆಲಿಸಿದರು.

ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸ್ಥಳೀಯ ಜನರಿಗೆ ದುರ್ವಾಸನೆಯಿಂದ ಜನರಿಗೆ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ವಾಸಕೋಶ ನೋವು, ತಲೆನೋವು, ವಾಂತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಎದುರಿಸುವಂತಾಗಿದೆ. ಜಿಲ್ಲಾಧಿಕಾರಿಯವರು ಘಟಕ ಮುಚ್ಚುವ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ಇಲ್ಲಿನ ಪರಿಸ್ಥಿತಿಯನ್ನು ಮನಗಂಡು ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ಪರಿಗಣಿಸಿ ಘಟಕ ಮುಚ್ಚಲು ಆದೇಶಿಸುವುದಾಗಿ ಘೋಷಿಸಿದರು.

Exit mobile version