main logo

ದೈವಾರಾಧನೆ ವೇಳೆ ಕುಸಿದು ಬಿದ್ದು ಮೃತಪಟ್ಟ ದೈವನರ್ತಕನ ಮಕ್ಕಳಿಗೆ ಸಿಕ್ಕ ದೀಕ್ಷೆ ಬೂಳ್ಯ

ದೈವಾರಾಧನೆ ವೇಳೆ ಕುಸಿದು ಬಿದ್ದು ಮೃತಪಟ್ಟ ದೈವನರ್ತಕನ ಮಕ್ಕಳಿಗೆ ಸಿಕ್ಕ ದೀಕ್ಷೆ ಬೂಳ್ಯ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಕಾಂತು ಅಜಿಲ ಮೃತಪಟ್ಟ ದೈವ ನರ್ತಕ. ಈ ಘಟನೆಯ ಬಳಿಕ ಆ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು.

ಇದೇ ವಿಚಾರದಲ್ಲಿ ಊರವರು ಪ್ರಶ್ನಾಚಿಂತನೆ ಇಟ್ಟಾಗ ಸಾವನ್ನಪ್ಪಿದ ಮಗನೇ ದೈವ ನರ್ತಕನಾಗಬೇಕು ಅಂತ ಕಂಡು ಬಂದಿತ್ತು. ಪ್ರಶ್ನೆಯಲ್ಲಿ ಕಂಡು ಬಂದಂತೆ ದೈವದ ಮುಂದೆ ಮೃತಪಟ್ಟ ದೈವ ನರ್ತಕನ ಮಕ್ಕಳಿಗೆ ದೀಕ್ಷೆ ಬೂಳ್ಯ ನೀಡಲಾಯಿತು.
ಕಾಂತು ಅಜಿಲನ ಮಕ್ಕಳಾದ ಮೋನಪ್ಪ ಹಾಗೂ ದಿನೇಶ್ ಅವರು ದೀಕ್ಷೆ ಬೂಲ್ಯ ಪಡೆದು, ಸಂಬಂಧಪಟ್ಟ ನಾಲ್ಕು ಗ್ರಾಮಕ್ಕೆ ದೈವಗಳ ಸೇವೆಯ ಜವಾಬ್ದಾರಿ ಹೊತ್ತರು. ಈ ಅಪೂರ್ವ ಕ್ಷಣವನ್ನು ಊರ ಹಾಗೂ ಪರವೂರಿನ ದೈವಭಕ್ತರು ಕಣ್ತುಂಬಿಕೊಂಡರು. ಈ ನೇಮಕ ಪ್ರಕ್ರಿಯೆಯ ಹಿಂದೆ ದೈವಾರಾಧನೆಯ ಎಲ್ಲಾ ಕಟ್ಟುಪಾಡುಗಳು ಅನ್ವಯವಾಗುತ್ತಿದ್ದು, ಶಿರಾಡಿ ದೈವದ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ಶಿರಾಡಿ ದೈವದ ನೇಮೋತ್ಸವದ ದಿನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ದೈವ ಇಬ್ನರಿಗೂ ಯಾವ ರೀತಿಯಲ್ಲಿ ದೈವದ ಸೇವೆಯನ್ನು ಮಾಡಬೇಕು ಅನ್ನೋದನ್ನು ಸವಿವರವಾಗಿ ತಿಳಿಸುವ ಪ್ರಕ್ರಿಯೆ ನಿಜಕ್ಕೂ ರೋಮಾಂಚನಕಾರಿಯಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!