ಡೆರ್ನಾ: ಪೂರ್ವ ಲಿಬಿಯಾದಲ್ಲಿ ‘ಡೇನಿಯಲ್’ ಚಂಡಮಾರುತದಿಂದ ಉಂಟಾದ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 5300ಕ್ಕೇ ಏರಿಕೆಯಾಗಿದ್ದು, 15 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಮೆಡಿಟರೇನಿಯನ್ ಕರಾವಳಿ ನಗರವಾದ ಡರ್ನಾದಲ್ಲಿ ಸಾವಿರಾರು ಜನರು ಕಾಣೆಯಾಗಿದ್ದು, ಸಾವಿನಪ್ಪಿದವರಿಗಾಗಿ ಹುಡುಕಾಟ ಮುಂದುವರಿದಿದೆ. ರಸ್ತೆ, ಬೀದಿ, ನದಿಗಳಲ್ಲಿ ಮೃತದೇಹಗಳೇ ಕಾಣುತ್ತಿವೆ. ಮಹಿಳೆಯರು, ಪುರುಷರು, ಮಕ್ಕಳ ನರಳಾಟ ಕೇಳತೀರದಾಗಿದೆ ಎಂದು ಎಂದು ಬೆಂಗಾಜಿಯ ಸಾಮಾಜಿಕ ಕಾರ್ಯಕರ್ತ ಎಮಾದ್ ಅಲ್-ಫಲಾಹ್
ತಿಳಿಸಿದ್ದಾರೆ.
ಡರ್ನಾ ನಗರದ ಮೇಲಿರುವ ಪರ್ವತಗಳಲ್ಲಿ ಎರಡು ಅಣೆಕಟ್ಟುಗಳು ಕುಸಿದುಬಿದ್ದು, ಪ್ರವಾಹದ ನೀರು ವಾಡಿ ನದಿಯ ನೀರು ಡೆರ್ನಾ ನಗರಕ್ಕೆ ನುಗ್ತಿದೆ ಎಂದು ಲಿಬಿಯಾದ ರೆಡ್ಕ್ರಾಸ್ನ ಅಂತರಾಷ್ಟ್ರೀಯ ಸಮಿತಿಯ ನಿಯೋಗದ ಮುಖ್ಯಸ್ಥ ಯಾನ್ ಫ್ರಿಡೆಜ್ ಬ್ರಾಡ್ಕಾಸ್ಟರ್ ಫ್ರಾನ್ಸ್ 24 ಗೆ ತಿಳಿಸಿದ್ದಾರೆ.