ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯನ್ನಾಡಿದ್ದಾರೆ.
ಪೌಡರ್ ರೂಪದಲ್ಲಿ ಸಾಗಿಸುತ್ತಿದ್ದ 14.50 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ತನ್ನೊಂದಿಗೆ ಇಷ್ಟು ದುಬಾರಿ ಮೌಲ್ಯದ ಚಿನ್ನವನ್ನು ಪುಡಿ ರೂಪದಲ್ಲಿ ಅಕ್ರವಾಗಿ ಸಾಗಾಟ ಮಾಡುತ್ತಿದ್ದ.
ರಟ್ಟಿನ ಪೆಟ್ಟಿಗೆ ಒಳಭಾಗದಲ್ಲಿ ದಪ್ಪ ನೀಲಿ ಹಾಳೆಗಳ ನಡುವೆ ಈ ಚಿನ್ನದ ಪೌಡರನ್ನು ಅಡಗಿಸಿಡಲಾಗಿತ್ತು.
ಇದೀಗ ಪ್ರಯಾಣಿಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.