ಬೆಂಗಳೂರು: ಅಕ್ರಮವಾಗಿ ವಿದೇಶದಿಂದ ಇಲ್ಲಿಗೆ ದ್ದ ಸಾಗಾಟ ಮಾಡುತ್ತಿದ್ದ 78 ಪ್ರಾಣಿಗಳನ್ನು ಮತ್ತು ಓರ್ವ ವ್ಯಕ್ತಿಯನ್ನು ಕೆಂಪೇಗೌಡ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬ್ಯಾಂಕಾಕ್ನಿಂದ ಏರ್ ಏಷ್ಯಾ ವಿಮಾನದಲ್ಲಿ ಬಂದಿದ್ದ ವ್ಯಕ್ತಿ ಬ್ಯಾಗ್ನಲ್ಲಿ ಜೀವಂತ 55 ಹೆಬ್ಬಾವು ಮರಿಗಳು, 17 ಕಾಳಿಂಗ ಸರ್ಪದ ಮರಿಗಳು ಮತ್ತು ಸತ್ತ 6 ಕಪ್ಪುಚುನ್ ಕೋತಿ ಮರಿಗಳ ಕಳೇಬರ ಪತ್ತೆ ಆಗಿದ್ದು, ಪ್ರಾಣಿಗಳ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಪ್ರಾಣಿಗಳ ಅಕ್ರಮ ಸಾಗಾಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ. ಸದ್ಯ ಪ್ರಾಣಿಗಳನ್ನ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.
ಜೀವಂತ ಸ್ಥಿತಿಯಲ್ಲಿದ್ದ ಹಾವುಗಳನ್ನುಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದ್ದು, ಕೋತಿಗಳ ಕಳೇಬರಕ್ಕೆ ಅಂತ್ಯ ಸಂಸ್ಕಾರವನ್ನು ನಡೆಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ತನ್ನ ಮಾಹಿತಿಯಲ್ಲಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಗೊಂಡಿದೆ ಎಂದು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಮ್ಮ ‘ಎಕ್ಸ್’ ಅಕೌಂಟಿನಲ್ಲಿ ಮಾಹಿತಿ ನೀಡಿದ್ದಾರೆ.
#IndianCustomsAtWork A case of Wildlife smuggling was booked by Bengaluru Air Customs on 6th Sep, 2023 at KIAL Bengaluru. Animals found alive have been deported to country of origin and 6 dead Capuchin monkeys were disposed. Further investigation under progress. pic.twitter.com/NoM0XTkcjq
— Bengaluru Customs (@blrcustoms) September 7, 2023