Site icon newsroomkannada.com

ಪ್ರೇಮಿಗಳ ದಿನದಂದು ಮೆಟ್ರೋದಲ್ಲಿ ಜೋಡಿಯ ರೊಮ್ಯಾನ್ಸ್‌ ವೈರಲ್‌

ನವದೆಹಲಿ: ಜೋಡಿಗಳ ಪ್ರಣಯದ ಅನೇಕ ವಿಡಿಯೋಗಳು ದೆಹಲಿ ಮೆಟ್ರೋದಲ್ಲಿ ವೈರಲ್ ಆಗುತ್ತಿವೆ. ಇನ್ನು ಕೆಲವು ವಿಡಿಯೋಗಳಲ್ಲಿ ದಂಪತಿ ನಡುವೆ ಜಗಳವಾಗುವುದನ್ನು ನೋಡಬಹುದು. ಇದೀಗ ಪ್ರೇಮಿಗಳ ದಿನದಂದು ಮೆಟ್ರೋದಲ್ಲಿ ಜೋಡಿಯೊಂದು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗೆಳತಿ ತನ್ನ ಗೆಳೆಯನ ಕಾಲರ್ ಹಿಡಿದಿರುವುದು ಕಾಣಿಸುತ್ತಿದೆ.ʼ

ಮೆಟ್ರೋದಲ್ಲಿ ಸಾಕಷ್ಟು ಪ್ರಯಾಣಿಕರು ಇರುವುದನ್ನು ಟೈರಲ್ ವಿಡಿಯೋದಲ್ಲಿ ಕಾಣಬಹುದು. ಅಷ್ಟರಲ್ಲಿ ಮೆಟ್ರೋದ ಒಂದು ಮೂಲೆಯಲ್ಲಿ ನಿಂತಿದ್ದ ಜೋಡಿಯೊಂದು ಪ್ರಣಯ ಸಂಭಾಷಣೆಯಲ್ಲಿ ತೊಡಗಿದೆ. ಗೆಳತಿ ಮೊದಲು ತನ್ನ ಗೆಳೆಯನ ಕಾಲರ್ ಅನ್ನು ಹಿಡಿದು ತನ್ನ ಕಡೆಗೆ ಎಳೆಯುತ್ತಿದ್ದಾಳೆ. ಇಬ್ಬರೂ ತುಂಬಾ ಹತ್ತಿರದಲ್ಲಿ ನಿಂತಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಲವರು ಇದನ್ನು ರೊಮ್ಯಾನ್ಸ್ ಎಂದು ಕರೆಯುತ್ತಿದ್ದರೆ, ಮತ್ತೆ ಕೆಲವರು ಇದರಲ್ಲಿ ತಪ್ಪೇನಿಲ್ಲ ಎಂದು ಹೇಳುತ್ತಾರೆ. ಈ ಬಗ್ಗೆ ಹಲವು ಬಳಕೆದಾರರು ಹಲವು ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

“ಎಲ್ಲಕ್ಕಿಂತ ಮೊದಲು ವಿಡಿಯೋ ಮಾಡಿದ್ದಕ್ಕೆ ಕೇಸ್ ದಾಖಲಿಸಬೇಕು. ಬೇರೆಯವರ ವಿಡಿಯೋ ರೆಕಾರ್ಡ್ ಮಾಡುವುದು ಹೇಗೆ”?, “ಇದರಲ್ಲಿ ಆಕ್ಷೇಪಾರ್ಹ ಏನಿದೆ”, “ಈಗ ಜನರು ಇಂತಹ ವಿಡಿಯೋವನ್ನು ರೆಕಾರ್ಡ್ ಮಾಡಿ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂತಹವರನ್ನು ನಿ*ಬ್ರಾ ಮತ್ತು ನಿ*ಬಿ ಎಂದು ಕರೆಯಿರಿ, ಜೋಡಿಗಳಲ್ಲ”, “ದೆಹಲಿ ಮೆಟ್ರೋಗೆ ಹೋಲಿಸಿದರೆ ನ್ಯೂಯಾರ್ಕ್‌ನ ಟ್ರಾಮ್ ಕೂಡ ವಿಫಲವಾಗಿದೆ”. “ವಿಡಿಯೋವನ್ನು ರೆಕಾರ್ಡ್ ಮಾಡಿ ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಹಕ್ಕನ್ನು ಯಾರು ನೀಡಿದ್ದಾರೆ”, “ಇದು ಒಳ್ಳೆಯದಲ್ಲ, ಇದರ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

Exit mobile version