Site icon newsroomkannada.com

ಅಮ್ಟಾಡಿ‌ಯಲ್ಲಿ ಹುಲ್ಲುಗಾವಲಿಗೆ ಬೆಂಕಿ ಇಡಲು ಹೋದ ಪತಿ ಪತ್ನಿ ಸಜೀಹ ದಹನ

ಮಂಗಳೂರು: ಮನೆ ಪಕ್ಕದ ಕಸಕ್ಕೆ ಹಾಕಿದ್ದ ಬೆಂಕಿಗೆ ಸಿಲುಕಿ ವೃದ್ಧ ದಂಪತಿ ದುರ್ಮರಣ ಹೊಂದಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಟಾಡಿ‌ ಬಳಿಯ ತುಂಡು ಪದವು ಎಂಬಲ್ಲಿ ನಡೆದಿದೆ. ಗಿಲ್ಬರ್ಟ್ ಕಾರ್ಲೋ(78) ಪತ್ನಿ ಕ್ರಿಸ್ಟಿನಾ ಕಾರ್ಲೋ(70) ಮೃತ ದುರ್ದೈವಿಗಳು. ಮನೆ ಪಕ್ಕದ ಕಸ ಕಡ್ಡಿಗೆ ದಂಪತಿ ಬೆಂಕಿ‌ ಹಾಕಿದ್ದರು. ಮನೆ ಪಕ್ಕದ ಕಾಡಿಗೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿಕೊಂಡಿದೆ. ಹಾಗಾಗಿ ಬೆಂಕಿಯನ್ನು ನಂದಿಸಲು ದಂಪತಿ ಮುಂದಾಗಿದ್ದಾರೆ. ಈ ವೇಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ದಂಪತಿ ಸುಟ್ಟು ಕರಕಲಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Exit mobile version