Site icon newsroomkannada.com

ಕೋಸ್ಟಲ್‌ ವುಡ್‌ ಕಲಾವಿದರ ಒಕ್ಕೂಟದಿಂದ ಕಿರುಚಿತ್ರ ಸ್ಪರ್ಧೆ ಪ್ರಶಸ್ತಿ ಪ್ರದಾನ ಸಮಾರಂಭ, ಸಾಧಕರಿಗೆ ಸನ್ಮಾನ

ಮಂಗಳೂರು: ಕೋಸ್ಟಲ್‌ ವುಡ್‌ ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟ ಮತ್ತು ಶ್ರೀ ವಿಠಲ ಶೆಟ್ಟಿ ಫೌಂಡೇಶನ್‌ ವತಿಯಿಂದ ಫಿಜಾ ನೆಕ್ಸಸ್‌ ಸಹಯೋಗದಲ್ಲಿ ಅಸ್ತ್ರ ಗ್ರೂಪ್‌ ಪ್ರಾಯೋಜಕತ್ವದಲ್ಲಿ ಫೋರಂ ಫಿಜಾ ಮಾಲ್‌ ನಲ್ಲಿ ಫೆ.7ರಂದು ಸಾಯಂಕಾಲ 4.30ಕ್ಕೆ ಮಿನಿ ಸಿನಿ ಅವಾರ್ಡ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಕರಾವಳಿ ಭಾಗದ ಪ್ರತಿಭಾನ್ವಿತ ಯುವ ಪ್ರತಿಭೆಗಳಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೋಸ್ಟಲ್‌ ವುಡ್‌ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ ಪ್ರಸ್ತುತ ಪಡಿಸಿದ ಕಿರುಚಿತ್ರ ಸ್ಪರ್ಧೆ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ.

ಕಾರ್ಯಕ್ರಮವನ್ನು ಡಾ. ಸಂಜೀವ ದಂಡೇ ಕೇರಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ಡಿ, ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ, ಬ್ರಿಜೇಶ್‌ ಚೌಟ, ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ, ಎಸಿಪಿ ಮಹೇಶ್‌ ಕುಮಾರ್‌ ಮೊದಲಾವರು ಪಾಲ್ಗೊಳ್ಳುವರು. ತುಳು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಲಕ್ಷ್ಮಣ್‌ ಕುಮಾರ್‌ ಮಲ್ಲೂರು ಅವರಿಗೆ ವಿಠಲ ಶೆಟ್ಟಿ ಲೈಫ್‌ ಟೈಮ್‌ ಅಚೀವ್‌ ಮೆಂಟ್‌ ಅವಾರ್ಡ್‌ ನೀಡಲಾಗುವುದು. ಸೇವ್‌ ಲೈಫ್‌ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ಅರ್ಜುನ್‌ ಭಂಡಾರ್ಕರ್‌ ಅವರಿಗೆ ಕಾಪು ಲೀಲಾಧರ್‌ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

Exit mobile version