main logo

ಕಾಸ್ಮೆಟಿಕ್ ಸರ್ಜರಿಯಿಂದ ಜೀವವೇ ಹೋಯ್ತು: ಖ್ಯಾತ ಮಾಡೆಲ್ ಜೀವ ತೆಗೆದ ಕಾಸ್ಮೆಟಿಕ್‌ ಸರ್ಜರಿ

ಕಾಸ್ಮೆಟಿಕ್ ಸರ್ಜರಿಯಿಂದ ಜೀವವೇ ಹೋಯ್ತು: ಖ್ಯಾತ ಮಾಡೆಲ್ ಜೀವ ತೆಗೆದ ಕಾಸ್ಮೆಟಿಕ್‌ ಸರ್ಜರಿ

ಹೀರೋಯಿನ್​ಗಳು ಸೌಂದರ್ಯ ಹೆಚ್ಚಿಸಿಕೊಳ್ಳಲು ಸರ್ಜರಿ ಮಾಡಿಕೊಳ್ಳುತ್ತಾರೆ. ಮೂಗು, ಕೆನ್ನೆ, ತುಟಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅಂದ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ತುಂಬಾನೇ ಅಪಾಯಕಾರಿ. ಹಾಗಿದ್ದರೂ ಈ ಪ್ರಯತ್ನ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಇದೇ ರೀತಿಯ ಪ್ರಯತ್ನದಲ್ಲಿದ್ದ ಪ್ರಸಿದ್ಧ ಸೆಲೆಬ್ರಿಟಿಯೊಬ್ಬರು ಸಣ್ಣ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತಪಟ್ಟವರು ಬ್ರೆಜಿಲ್​​ನ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಲುವಾನಾ ಆಂಡ್ರೇಡ್. ಅವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು. ಲುವಾನಾ ಸಾವು ಎಲ್ಲೆಡೆ ಸಂಚಲನ ಮೂಡಿಸಿದೆ. ಕಾಸ್ಮೆಟಿಕ್ ಸರ್ಜರಿ ವೇಳೆ ಲುವಾನಾ ಹೃದಯಾಘಾತಕ್ಕೆ ಒಳಗಾದರು. ಬೆಚ್ಚಿ ಬೀಳಿಸುವ ವಿಚಾರ ಎಂದರೆ ಶಸ್ತ್ರಚಿಕಿತ್ಸೆ ವೇಳೆ ಲುವಾನಾಗೆ ನಾಲ್ಕು ಬಾರಿ ಹೃದಯಾಘಾತ ಆಗಿತ್ತು. ಅವರು ಬದುಕುಳಿಯಲೇ ಇಲ್ಲ.
ಬ್ರೆಜಿಲಿಯನ್ ಟಿವಿ ಶೋ ‘ಪವರ್ ಕಪಲ್ 6′ ನಿಂದ ಲುವಾನಾ ಜನಪ್ರಿಯತೆ ಪಡೆದಿದ್ದರು. ಅವರು ಆಸ್ಪತ್ರೆಯಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವೇಳೆ ಲುವಾನಾಗೆ ಉಸಿರಾಟದ ತೊಂದರೆ ಆಗಿದೆ. ಆ ಬಳಿಕ ನಾಲ್ಕು ಬಾರಿ ಹೃದಯಾಘಾತ ಆಗಿದೆ. ಅವರನ್ನು ವೈದ್ಯರು ತಕ್ಷಣ ಐಸಿಯು ವಾರ್ಡ್​ಗೆ ಸ್ಥಳಾಂತರಿಸಿದ್ದಾರೆ. ಆದರೆ ವೈದ್ಯರು ಲುವಾನಾ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ.

Related Articles

Leave a Reply

Your email address will not be published. Required fields are marked *

error: Content is protected !!