ಮಂಗಳೂರು: ಆರ್‌ಎಸ್ ಸಂಘಟನೆ ಕುರಿತು ನನಗೆ ಪ್ರತಿ ವಿಚಾರಗಳು ತಿಳಿದಿವೆ. ಅದರ ಕುರಿತು ದಾಖಲೆಗಳನ್ನು ಇರಿಸಿ ಸಾಮರ್ಥ್ಯ ನನ್ನಲ್ಲಿದೆ. ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ಪರವಾಗಿಯೇ ಇದ್ದ ಸಂಘಟನೆ ಈಗಲೂ ಅದನ್ನೇ ಮಾಡುತ್ತಿದೆ ಎಂದು ಚಿಂತಕ ಡಾ ಶಂಸುಲ್ ಇಸ್ಲಾಂ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಾತ್ಮಾ ಗಾಂಧಿ ಅವರನ್ನು ಕೊಂದದ್ದು ಯಾರು ಎಂದು ಪ್ರಶ್ನಿಸಿದರು. ಮಹಾತ್ಮಾ ಗಾಂಧಿ ನಿಜವಾದ ಸನಾತನಿಯಾಗಿದ್ದರು. ಅವರನ್ನು ಕೊಂದ ಗೋಡ್ಸೆಯನ್ನು ಆರ್‌ಎಸ್‌ಎಸ್‌ನವರು ಶ್ರೀ ಕೃಷ್ಣ ನಿಗೆ ಹೋಲಿಸಿದ್ದರು. ಈ ಬಗ್ಗೆ ನನ್ನಲ್ಲಿ ದಾಖಲೆಗಳಿವೆ ಎಂದು ತಿಳಿಸಿದರು. ಸಂಶುಲ್ ಉಪನ್ಯಾಸಕ್ಕೆ ಎಬಿವಿಪಿ ಭಾರಿ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ ಸಂಶುಲ್ ಪ್ರತಿಭಟನೆ ನಡೆಸುತ್ತಿರುವ ಎಬಿವಿಪಿ ಪ್ರತಿಭಟನಾಕಾರರು ರಾಷ್ಟ್ರ ದ್ರೋಹಿಗಳು. ಎಬಿವಿಪಿ ಸಂಘಟನೆ ಅರ್ ಎಸ್ ಎಸ್ ನ ಒಂದು ಭಾಗ ಎಂದರು.
ಭಾರಿ ವಿರೋಧ ಪ್ರತಿಭಟನೆ: ಡಾ ಶಂಸುಲ್ ಇಸ್ಲಾಂ ಉಪನ್ಯಾಸ ಕಾರ್ಯಕ್ರಮಕ್ಕೆ ಎಬಿವಿಪಿ ಭಾರೀ ವಿರೋಧ ವ್ಯಕ್ತಪಡಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ನಡುವೆಯೇ
ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟನೆ ಮೊದಲು ಬಲಿದಾನ ಗೈದ ಸ್ವಾತಂತ್ರ್ಯ ಹೋರಾಟಗಾರರಿಗೆ ಡಾ. ಶಂಸುಲ್ ಗೌರವ ಗೀತೆ ಹಾಡಿದರು. ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮವಿದು. ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವವರು ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ ಎಂದು ತಿಳಿಸಿದರು.