Site icon newsroomkannada.com

ಹಾವಿನ ಬಾಯಿಗೆ ಬಾಯಿ ಕೊಟ್ಟು ಜೀವ ಉಳಿಸಿದ ಕಾನ್‌ ಸ್ಟೇಬಲ್‌: ಮೈ ಝಂ ಎನಿಸುವ ವಿಡಿಯೋ ನೋಡಿ

ಭೋಪಾಲ್: ಮಧ್ಯಪ್ರದೇಶದ ಕಾನ್‌ಸ್ಟೆಬಲ್ ಒಬ್ಬರು ಹಾವಿಗೆ ಉಸಿರಿಗೆ ಉಸಿರು ಕೊಟ್ಟು ಜೀವ ಉಳಿಸುವ ವಿಡಿಯೋವೊಂದು ವೈರಲ್‌ ಆಗಿದೆ. ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ವಿಷ ರಹಿತ ಹಾವು ವಸತಿ ಕಾಲೋನಿಯ ಪೈಪ್‌ಲೈನ್‌ ಒಳಗೆ ನುಗ್ಗಿತ್ತು. ಆದರೆ ಇದನ್ನು ಕಂಡ ಅಲ್ಲಿನ ನಿವಾಸಿಗಳು ಹಾವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ.

ಈ ಪ್ರಯತ್ನ ವಿಫಲವಾದಾಗ ಪೈಪ್‌ಗೆ ಕೀಟನಾಶಕ ಬೆರೆಸಿದ ನೀರನ್ನು ಸುರಿದಿದ್ದಾರೆ. ಈ ವೇಳೆ ಹೊರ ಬಿದ್ದಿದೆ. ಬಳಿಕ ನಿಸ್ಚತೇಜವಾಗಿದ್ದ ಹಾವನ್ನು ಕಂಡು ಪೊಲೀಸರಿಗೆ ಕರೆ ಮಾಡಿದ್ದಾರೆ.

ಈ ವೇಳೆ ಸ್ವತಃ ಹಾವು ರಕ್ಷಕರಾಗಿರುವ ಕಾನ್‌ಸ್ಟೆಬಲ್ ಅತುಲ್ ಶರ್ಮಾ ಹಾವಿಗೆ ತಮ್ಮ ಬಾಯಿಂದ ಬಾಯಿಕೊಟ್ಟು ಉಸಿರಾಡುವಂತೆ ಮಾಡುವುದು ವಿಡಿಯೋದಲ್ಲಿದ್ದೆ. ಬಳಿಕ ಹಾವನ್ನು ಶುದ್ಧ ನೀರನ್ನು ಚಿಮುಕಿಸುತ್ತಾರೆ. ಕಳೆದ 15 ವರ್ಷಗಳಲ್ಲಿ 500 ಹಾವುಗಳನ್ನು ರಕ್ಷಿಸಿರುವುದಾಗಿ ಶ್ರೀ ಶರ್ಮಾ ಹೇಳಿಕೊಂಡಿದ್ದಾರೆ. ಹಾವು ರಕ್ಷಣೆ ಕುರಿತು ಡಿಸ್ಕವರಿ ಚಾನೆಲ್‌ ನಲ್ಲಿ ನಾನು ಕಲಿತುಕೊಂಡೆ ಎಂದು ಹೇಳಿದ್ದಾರೆ ಅತುಲ್‌.

https://twitter.com/Anurag_Dwary/status/1717399967239655597?ref_src=twsrc%5Etfw%7Ctwcamp%5Etweetembed%7Ctwterm%5E1717399967239655597%7Ctwgr%5E6899cbaf0927e0691fa9333f6406ac9a074c722e%7Ctwcon%5Es1_&ref_url=https%3A%2F%2Fwww.udayavani.com%2Fviral-news%2Fvideo-shows-madhya-pradesh-cop-performing-cpr-on-snake-that-ingested-pesticideshttps://www.ndtv.com/india-news/did-madhya-pradesh-cops-cpr-revive-snake-that-drank-pesticide-maybe-not-4514904

Exit mobile version