ಬೆಂಗಳೂರು: ಕೇಂದ್ರ ನಗರ ಅಪರಾಧ ವಿಭಾಗದ (ಸಿಸಿಬಿ) ಬಂಧಿತ ಶಂಕಿತ ಭಯೋತ್ಪಾದಕರ ನಿವಾಸದಿಂದ ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದ್ದು, ಶಂಕಿತರು ಆಗಸ್ಟ್ 15 ಅಥವಾ ಅದಕ್ಕೂ ಮೊದಲು ಬೆಂಗಳೂರಿನ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಬಯಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ಉಗ್ರ ಜಾಹೀದ್ನ ಕೊಡಿಗೆಹಳ್ಳಿಯಲ್ಲಿರುವ ಮನೆಯಲ್ಲಿ 4 ಗ್ರೆನೇಡ್ ಪತ್ತೆಯಾಗಿದೆ. ಈವರೆಗೂ ರಾಜ್ಯದಲ್ಲಿ ಜೀವಂತ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರಲಿಲ್ಲ ಎನ್ನಲಾಗಿದೆ. ಆದರೆ, ಇದೀಗ ಸಿಲಿಕಾನ್ ಸಿಟಿಯಲ್ಲಿ ಒಂದೇ ಬಾರಿಗೆ ನಾಲ್ಕು ಸಜೀವ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.
ತಲೆಮರೆಸಿಕೊಂಡಿರುವ ಜುನೆದ್‌ನಿಂದ ಯಾರೋ ಒಬ್ಬರ ಮೂಲಕ ಅವುಗಳನ್ನು ಪಡೆದುಕೊಂಡಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಶರಣಪ್ಪ ಎಸ್‌ಡಿ ಸುದ್ದಿಗಾರರಿಗೆ ತಿಳಿಸಿದರು. ಆರೋಪಿಯು ತನ್ನ ಮನೆಯಲ್ಲಿ ಮರಳಿನ ಚೀಲದಲ್ಲಿ ಈ ಗ್ರೆನೇಡ್‌ಗಳನ್ನು ಅಡಗಿಸಿಟ್ಟಿದ್ದ ಎಂದು ಶರಣಪ್ಪ ವಿವರಿಸಿದರು.