ಬೆಂಗಳೂರು: ಜುಲೈ 1ರಿಂದ ‘ಗೃಹಜ್ಯೋತಿ’ ಯೋಜನೆ ಗ್ಯಾರಂಟಿ ಆರಂಭವಾಗಲಿದೆ. ಮಾಸಿಕ 200 ಯೂನಿಟ್ವರೆಗಿನ ವಿದ್ಯುತ್ ಬಳಕೆ ಉಚಿತವಾಗಲಿದೆ. ಜೂನ್ 18ರಿಂದ ಗೃಹಜ್ಯೋತಿ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಗೃಹಜ್ಯೋತಿ ಯೋಜನೆಯ ಒಟ್ಟು ಫಲಾನುಭವಿಗಳು 2.14 ಕೋಟಿ ಇದ್ದು ಸದ್ಉ ಗೃಹಜ್ಯೋತಿಗೆ ಇದುವರೆಗೆ 85,91,005 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ಅದೇರೀತಿ ಇಂದಿನಿಂದ ಅನ್ನಭಾಗ್ಯ ಯೋಜನೆ ಜಾರಿಯಾಗಲಿದೆ. 5 ಕೆಜಿ ಅಕ್ಕಿ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುತ್ತೇವೆ ಎಂದು ಬೆಂಗಳೂರಿನಲ್ಲಿ ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ. ಹೆಚ್ಚುವರಿ 5 ಕೆಜಿ ಅಕ್ಕಿ ಸಿಗುವವರೆಗೂ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದಿದ್ದಾರೆ.