Site icon newsroomkannada.com

ಮತದಾರರನ್ನು ಸೆಳೆಯಲು ಹೀಗೊಂದು ಹೊಸ ತಂತ್ರ..!: ಕಾಂಡೋಮ್‌ ಪ್ಯಾಕ್‌ಗಳಲ್ಲಿ ರಾಜಕೀಯ ಪಕ್ಷಗಳ ಹೆಸರು..!ವಿಡಿಯೋ ವೈರಲ್..

ಭೋಪಾಲ್‌: ಲೋಕಸಭಾ ಚುನಾವಣೆಯ (Loksabha Election) ಹೊತ್ತಲ್ಲೇ ಕಾಂಡೋಮ್‌ ಸದ್ದು ಮಾಡುತ್ತಿದ್ದು, ಆಂಧ್ರಪ್ರದೇಶದಲ್ಲಿ ಇವುಗಳು ಚುನಾವಣಾ ಪ್ರಚಾರದ ಸಾಧನವಾಗಿ ಮಾರ್ಪಟ್ಟಿವೆ. ಹೌದು. ಎರಡು ಪಕ್ಷಗಳ ಹೆಸರಿನಲ್ಲಿ ಕಾಂಡೋಮ್‌ ಪ್ಯಾಕ್‌ಗಳು (Condom Pack) ಮಾರಾಟವಾಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. YSR ಕಾಂಗ್ರೆಸ್ ಪಕ್ಷ ಮತ್ತು ತೆಲುಗು ದೇಶಂ ಪಾರ್ಟಿ (TDP) ಪಕ್ಷದ ಕಾರ್ಯಕರ್ತರು ಮತದಾರರಿಗೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವೀಡಿಯೋದಲ್ಲಿ ಏನಿದೆ..?: ಕಾಂಡೋಮ್‌ಗಳನ್ನು ಸಾರ್ವಜನಿಕರಿಗೆ ಹಂಚಲಾಗುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬ ಕಾಂಡೋಮ್‌ಗಳನ್ನು ಏಕೆ ವಿತರಿಸಲಾಗುತ್ತಿದೆ ಎಂದು ಟಿಡಿಪಿ ಕಾರ್ಯಕರ್ತ ಎಂದು ಹೇಳಲಾದವನನ್ನು ಕೇಳಿದಾಗ, ಹೆಚ್ಚು ಮಕ್ಕಳಿದ್ದರೆ, ಹೆಚ್ಚಿನ ಹಣವನ್ನು ವಿತರಿಸಬೇಕು. ಅದಕ್ಕಾಗಿಯೇ ಈ ಕಾಂಡೋಮ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಉತ್ತರಿಸಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದೆ.

ಒಟ್ಟಿನಲ್ಲಿ ಕಾಂಡೋಮ್ ಪ್ಯಾಕೆಟ್‌ಗಳು ಲೋಕಸಭಾ ಚುನಾವಣೆಗಾಗಿ ಮನೆ ಮನೆಗೆ ಪ್ರಚಾರ ನಡೆಸುತ್ತಿರುವ ಪಕ್ಷದ ಮುಖಂಡರು ಸಾರ್ವಜನಿಕರಿಗೆ ವಿತರಿಸಿದ ಕಿಟ್‌ನ ಭಾಗವಾಗಿವೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕಾಂಡೋಮ್‌ಗಳನ್ನು ವಿತರಿಸಿದ್ದಕ್ಕಾಗಿ ಎರಡೂ ಪಕ್ಷಗಳು ಪರಸ್ಪರ ಕೆಸರೆರಚಿಕೊಂಡಿರುವುದಾಗಿ ವರದಿಯಾಗಿದೆ.

ವೈಎಸ್‌ಆರ್‌ಸಿಪಿ ತನ್ನ ಎಕ್ಸ್‌ ಖಾತೆಯಲ್ಲಿ ಟಿಡಿಪಿ ಪಕ್ಷವು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ಇದರಿಂದ ಗೊತ್ತಾಗುತ್ತದೆ ಎಂಬುದಾಗಿ ವಾಗ್ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, YSRCP ಲೋಗೋದೊಂದಿಗೆ ಟಿಡಿಪಿ ಇದೇ ರೀತಿಯ ಕಾಂಡೋಮ್ ಪ್ಯಾಕ್ ಅನ್ನು ಪೋಸ್ಟ್ ಮಾಡಿದೆ.

Exit mobile version