ಕಾಪು: ಕೈಪುಂಜಾಲು (Kaipunjal) ಕಡಲ ಕಿನಾರೆಯಲ್ಲಿ ಹಿಂದೂಗಳ ಜಮೀನಿನಲ್ಲಿರುವ ಸೈಯದ್ ಅರಬ್ಬಿ ವಲಿಯುಲ್ಲಾಹಿ ದರ್ಗಾದಲ್ಲಿ ವಿಜೃಂಭಣೆಯಿಂದ ವಾರ್ಷಿಕ ಉರೂಸ್ (Urs) ಕಾರ್ಯಕ್ರಮ ಸಂಪನ್ನಗೊಂಡಿತು.
ಕೈಪುಂಜಾಲು ದರ್ಗಾವು ಹಿಂದೂ (Hindu) ಮತ್ತು ಮುಸ್ಲಿಂ (Muslim) ಧರ್ಮೀಯರ ನಂಬಿಕೆ ಮತ್ತು ಭಕ್ತಿಯ ಶ್ರದ್ಧಾ ಕೇಂದ್ರವಾಗಿದ್ದು ಭಾವೈಕ್ಯದ ಪ್ರತೀಕವಾಗಿ ಗಮನ ಸೆಳೆಯುತ್ತಿದೆ.
ಹಿಂದೂ ಬಾಂಧವರ ಜಾಗದಲ್ಲಿರುವ ಸೈಯದ್ ಅರಬ್ಬಿ ವಲಿಯುಲ್ಲಾಹಿ ದರ್ಗಾದಲ್ಲಿ ಮುಸ್ಲಿಮರಷ್ಟೇ ಅಲ್ಲದೇ ಸರ್ವ ಧರ್ಮೀಯರ ಶ್ರದ್ಧಾ ಭಕ್ತಿ ಕೇಂದ್ರವಾಗಿರುವ ಈ ದರ್ಗಾ ಕರಾವಳಿಯಲ್ಲಿ ಹಿಂದಿನಿಂದಲೂ ಇದ್ದ ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಶ್ರೀಯಾನ್ ಕುಟುಂಬಸ್ಥರ ಜಮೀನಿನಲ್ಲಿರುವ ಈ ದರ್ಗಾದಲ್ಲಿ ಕಾಪು (Kaup) ಪೊಲಿಪು (Polipu) ಜಾಮಿಯ ಮಸೀದಿಯ (Jamia Masjid) ಆಡಳಿತ ಕಮಿಟಿಯ ಮೇಲುಸ್ತುವಾರಿಯಲ್ಲಿ ವರ್ಷಕ್ಕೊಮ್ಮೆ ಉರೂಸ್ ಆಚರಿಸಲಾಗುತ್ತದೆ.
ಪ್ರತೀ ವರ್ಷ ಮುಸ್ಲಿಂ ಕ್ಯಾಲೆಂಡರ್ ನ ಸಫರ್ ತಿಂಗಳಲ್ಲಿ ಉರೂಸ್ ಆಚರಿಸಿಕೊಂಡು ಬರಲಾಗುತ್ತಿದೆ. ಸಾವಿರಾರು ಮಂದಿ ಇಲ್ಲಿನ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥಿಸಿ ಹರಕೆ ಸಲ್ಲಿಸಿದರು.