main logo

ಸ್ವಾತಂತ್ರ್ಯ ಬಳಿಕ ಬ್ರಿಟಿಷರ ಏಜೆಂಟರಿಂದ ವಸಾಹತುಶಾಹಿ ಮನಸ್ಥಿತಿ ಜೀವಂತ: ಹೊಸಬಾಳೆ

ಸ್ವಾತಂತ್ರ್ಯ ಬಳಿಕ ಬ್ರಿಟಿಷರ ಏಜೆಂಟರಿಂದ ವಸಾಹತುಶಾಹಿ ಮನಸ್ಥಿತಿ ಜೀವಂತ: ಹೊಸಬಾಳೆ

ಹೊಸದಿಲ್ಲಿ: ಸ್ವಾತಂತ್ರ್ಯದ ನಂತರವೂ ಮುಂದುವರಿದಿರುವ ವಸಾಹತುಶಾಹಿ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಹೇಳಿದರು. ರಾಜ್ಯಸಭಾ ಮಾಜಿ ಸಂಸದ ಬಲ್ಬೀರ್ ಪೂಂಜ್ ಅವರ ” ನರೇಟಿವ್‌ ಕಾ ಮಾಯಾಜಾಲ್” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹೊಸಬಾಳೆ, ಬ್ರಿಟಿಷರ ವಸಹಾತುಷಾಹಿ ಮನಸ್ಥಿತಿಯನ್ನು ಸ್ವಾತಂತ್ರ್ಯದ ನಂತರ ಅವರ “ಏಜೆಂಟರು” ಮುಂದುವರಿಸಿದರು ಎಂದರು.

ಮೊಘಲರು ದೇಶದ ಮೇಲೆ ಆಕ್ರಮಣ ಮಾಡಿದಾಗ, ಜನರು ಅವರನ್ನು ಉಗ್ರವಾಗಿಯೇ ಎದುರಿಸಿದರು. ನಮ್ಮ ದೇಶದ ಮೇಲೆ ದಾಳಿ ಮಾಡಿದ ಮೊಘಲರನ್ನು ಭಾರತೀಯರೆಂದು ಶ್ರೇಷ್ಠರೆಂದು ಪರಿಗಣಿಸಿಲ್ಲ. ಅವರನ್ನು ಅನಾಗರಿಕ ಅಕ್ರಮಣಕಾರರೆಂದೇ ಜನರು ಪರಿಗಣಿಸಿದ್ದಾರೆ ಎಂದರು.

ಸ್ವಾತಂತ್ರ್ಯಕ್ಕಿಂತ ಮೊದಲು ಮತ್ತು ನಂತರ ಭಾರತ, ಹಿಂದೂಗಳು, ಅದರ ಸಂಸ್ಕೃತಿಯ ವಿರುದ್ಧ ದ್ವೇಷ ಹರಡುವ ಕೃತ್ಯವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದರು. ಯುರೋಪ್ ಕೇಂದ್ರಿತ ಆಲೋಚನೆಗಳು ನಮ್ಮ ಜೀವನ, ಶಿಕ್ಷಣ ವ್ಯವಸ್ಥೆ, ಸಮಾಜದಲ್ಲಿ ಬಲವಾಗಿ ಬೇರೂರಿವೆ. ಇಂತಹ ವಸಹಾತುಶಾಹಿ ಮನಸ್ಥಿತಿ ಬದಲಾಗಬೇಕಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇರಳ ರಾಜ್ಯಪಾಲ ಆರೀಫ್‌ ಮಹಮ್ಮದ್‌ ಮಾತನಾಡಿ ನಾನು ನಾಗಪುರ ಏಕಲ್‌ ವಿದ್ಯಾಲಯಕ್ಕೆ ಭೇಟಿ ನೀಡಿದ್ದು ಅಲ್ಲಿನ ಕಾರ್ಯಗಳು ನನಗೆ ಬಹಳಷ್ಟು ಮೆಚ್ಚುಗೆ ಆಯಿತು ಎಂದು ಹೇಳಿದರು.

ಏಕಲ್‌ ವಿದ್ಯಾಲಯ ಎಲ್ಲಿದೆ: ಏಕಲ್ ವಿದ್ಯಾಲಯ ಫೌಂಡೇಶನ್ ಅನ್ನು 1986 ರಲ್ಲಿ ಗುಮ್ಲಾ ಜಿಲ್ಲೆಯಲ್ಲಿ (ಈಗ ಜಾರ್ಖಂಡ್‌ನಲ್ಲಿದೆ) ಸ್ಥಾಪಿಸಲಾಯಿತು. ಅದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) 3 ನೇ ಸರ್ಸಂಘಚಾಲಕ್ ಮಧುಕರ್ ದತ್ತಾತ್ರಯ ದೇವರಸ್ ಅವರ ಕಿರಿಯ ಸಹೋದರ ಭೌರಾವ್ ದೇವರಸ್ ಸ್ಥಾಪಿಸಿದರು.

Related Articles

Leave a Reply

Your email address will not be published. Required fields are marked *

error: Content is protected !!